Tuesday 28 September 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಲೋಹದ ಹಕ್ಕಿಗಳ ಕಲರವಕ್ಕೆ ಯಲಹಂಕ ವಾಯುನೆಲೆ ಸಜ್ಜು

ಏರ್ ಶೋ ಆರಂಭಕ್ಕೂ ಮುನ್ನ ಲೋಹದ ಹಕ್ಕಿಗಳ ತಾಲೀಮು ಮೈ ನವಿರೇಳಿಸುವಂತಿತ್ತು. ಈಗಾಗಲೇ ನೂರಾರು ಮಂದಿ ತಾಲೀಮನ್ನು ಕಣ್ತುಂಬಿಕೊಂಡಿದ್ದು, ನಾಳಿನ ಏರ್ ಶೋ ವೈಭವಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

2021-02-02 05:30:00, ajeyanews.com

Ajeya Imageಬೆಂಗಳೂರು, ಫೆ.2:
ಯಲಹಂಕ ವಾಯು ನೆಲೆಯಲ್ಲಿ ನಾಳೆಯಿಂದ  ಮೂರು ದಿನಗಳ ಕಾಲ ಲೋಹದ ಹಕ್ಕಿಗಳ ಕಲರವ ಆರಂಭವಾಗಲಿದೆ. 

ಕೋವಿಡ್ ಕಾರಣದಿಂದ 2021ರ ಏರ್ ಶೋ ನಡೆಯುವುದು ಅನುಮಾನ ಎನ್ನಲಾಗಿತ್ತು, ಬೆಂಗಳೂರಿನಲ್ಲಿ ಈ ಬಾರಿ ಏರ್ ಶೋ ಇರುವುದಿಲ್ಲ ಎನ್ನುವ ಮಾತುಗಳೂ ಕೇಳಿ ಬಂದಿದ್ದವು. ಈಗ ಎಲ್ಲದ್ದಕ್ಕೂ ಪೂರ್ಣ ವಿರಾಮ ಬಿದ್ದಿದ್ದು ನಾಳೆಯಿಂದ ಅಧಿಕೃತವಾಗಿ ಏರ್ ಶೋ ವೈಮಾನಿಕ ಪ್ರದರ್ಶನ 2021 ಆರಂಭವಾಗಲಿದೆ.

ಏರ್ ಇಂಡಿಯಾ 2021 ಉದ್ಘಾಟನೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿಗೆ ರಾಜನಾಥ್ ಸಿಂಗ್ ಆಗಮಿಸಿದರು. ಬೆಂಗಳೂರಿಗೆ ಆಗಮಿಸಿದ ಸಚಿವ ರಾಜನಾಥ್ ಸಿಂಗ್ ಅವರನ್ನು ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರು ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡಿದ್ದಾರೆ.Ajeya Image

ಏರ್ ಶೋ ಆರಂಭಕ್ಕೂ ಮುನ್ನ ಲೋಹದ ಹಕ್ಕಿಗಳ ತಾಲೀಮು ಮೈ ನವಿರೇಳಿಸುವಂತಿತ್ತು. ಈಗಾಗಲೇ ನೂರಾರು ಮಂದಿ ತಾಲೀಮನ್ನು ಕಣ್ತುಂಬಿಕೊಂಡಿದ್ದು, ನಾಳಿನ ಏರ್ ಶೋ ವೈಭವಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.          

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ನಗರ ಮತ್ತು ಹೊರವಲಯದ ಪ್ರದೇಶಗಳ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುರಕ್ಷಿತ ಹಾಗೂ ಮಿತವ್ಯಯಕರ ಪ್ರಯಾಣ ದರಗಳಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.Ajeya Image

ಏರೋ ಇಂಡಿಯಾ-2021 ಪ್ರದರ್ಶನ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಅಗತ್ಯ ಸಾರಿಗೆ ಸೌಲಭ್ಯವನ್ನು ಒದಗಿಸಲು ಫೆ.3-5ರವರೆಗೆ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಯಲಹಂಕ ಬಸ್ ನಿಲ್ದಾಣಗಳಿಂದ ಪ್ರಯಾಣಿಕರ ಬೇಡಿಕೆ/ದಟ್ಟಣೆಗನುಗುಣವಾಗಿ, ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಿ, ಸಾರಿಗೆ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.Ajeya ImageAjeya Image


ಪದಗಂಟು :        
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©