Sunday 07 March 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಲಿಲಿಪುಟ್ ಸುದ್ದಿ

ತರುಣೋದಯ ಸಂಸ್ಥೆಗೆ ಪುಸ್ತಕ ಕೊಡುಗೆ

2021-02-18 05:30:00, ajeyanews.com

Ajeya Image
ಶಿವಮೊಗ, ಫೆ.18:

ನಗರದ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಗೆ ಅಧ್ಯಕ್ಷ ಟಿ.ವಿ. ನರಸಿಂಹಮೂರ್ತಿ ಮಹಾಭಾರತದ ಸಮಗ್ರ ಶ್ಲೋಕಗಳುಳ್ಳ  ಕನ್ನಡ ಅನುವಾದ ಮತ್ತು  ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ನಿರ್ಣಯ ಹಾಗೂ ವಾದಿರಾಜಗುರು ಸಾರ್ವಭೌಮರು ಲಕ್ಷಾಲಂಕಾರದೊಂದಿಗೆ ರಚಿಸಿರುವ ಗ್ರಂಥವನ್ನು ಇಂದು ಸಮರ್ಪಿಸಿದರು.

ಸಮರ್ಪಪಣಾ ಸಮಾರಂಭದಲ್ಲಿ ಶ್ರೀಮನ್ ಮಧ್ವ ಸೇವಾ ಸಂಘ ಸಂಸ್ಕೃತ ವೇದಪಾಠಶಾಲೆಯ ಪ್ರಾಚಾರ್ಯ ವಿ. ಶ್ರೀಪಾದಾಚಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ ನರಸಿಂಹಮೂರ್ತಿ ಅವರು ನೀಡಿರುವ ಪುಸ್ತಕವೂ

ವಿದ್ಯಾಧೀಶ ತೀರ್ಥ ಶ್ರೀಪಾದರು ಪಲಿಮಾರು ಮಠ ಇವರ ಆಶೀರ್ವಾದದೊಂದಿಗೆ ವಿದ್ವಾನ್ ಶೇಷಗಿರಿ ಆಚಾರ್ಯ ಪಿ.ಎಸ್. ಮೈಸೂರು ಇವರು ಅನುವಾದಿಸಿರುತ್ತಾರೆ. ಅಲ್ಲದೆ  ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ತಾತ್ಪರ್ಯ ನಿರ್ಣಯ ಹಾಗೂ ವಾದಿರಾಜ ಗುರುಸಾರ್ವಭೌಮರು ಲಕ್ಷ ಅಲಂಕಾರದೊಂದಿಗೆ ಹೊಂದಿರತಕ್ಕಂತಹ ಈ ಪುಸ್ತಕವು ಮಹಾಭಾರತ ವನ್ನು ಅಧ್ಯಯನ ಮಾಡುವರಿಗೆ ತುಂಬಾ ಉತ್ತಮವಾಗಿದೆ ಎಂದರು.

ಎಂ. ಮಾಧವಾಚಾರ್,  ಆಚಿ ಪ್ರಕಾಶ್,  ಮನು ಚವ್ಹಾಣ್, ಚಂದ್ರಿಕಾ ಮೂರ್ತಿ, ಸುಧಾ ಮಾದು ಇದ್ದರು.

ಪದಗಂಟು :      
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©