Sunday 07 March 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಫೆ.20: ಅಂಬೆಗಾಲು ಕಿರುಚಿತ್ರ ಸ್ಪರ್ಧೆ ಪ್ರಶಸ್ತಿ ಪ್ರದಾನ

ಈ ಸಮಾರಂಭವನ್ನು ಶಿವಮೊಗ್ಗ ಬೆಳ್ಳಿ ಮಂಡಲ ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಕ್ರಿಯ ಸದಸ್ಯರಾಗಿದ್ದ ಕಲಾವಿದ ದಿ.ಮೈ.ನಾ.ಸುಬ್ರಮಣ್ಯ (ಮೈನಾಸು) ರವರ ಸ್ಮರಣೆಯಲ್ಲಿ ಆಯೋಜಿಸಲಾಗಿದೆ ಎಂದರು.

2021-02-18 05:30:00, ajeyanews.com

Ajeya Image
ಶಿವಮೊಗ್ಗ, ಫೆ.18:
ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜ ಹಾಗೂ ಯುಗಧರ್ಮ ಜಾನಪದ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಫೆ.20ರಂದು ಕುವೆಂಪು ರಂಗಮಂದಿರದಲ್ಲಿ ಅಂಬೆಗಾಲು-4 ಕಿರುಚಿತ್ರ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು 2 ಹಂತದಲ್ಲಿ ನಡೆಯಲಿದೆ ಎಂದು ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕ ಡಿ.ಎಸ್.ಅರುಣ್ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಮಾರಂಭವನ್ನು ಶಿವಮೊಗ್ಗ ಬೆಳ್ಳಿ ಮಂಡಲ ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಕ್ರಿಯ ಸದಸ್ಯರಾಗಿದ್ದ ಕಲಾವಿದ ದಿ.ಮೈ.ನಾ.ಸುಬ್ರಮಣ್ಯ (ಮೈನಾಸು) ರವರ ಸ್ಮರಣೆಯಲ್ಲಿ ಆಯೋಜಿಸಲಾಗಿದೆ ಎಂದರು. 

ಈ ಬಾರಿಯ ಸ್ಪರ್ಧೆಯಲ್ಲಿ 35 ಕಿರುಚಿತ್ರಗಳು ರಾಜ್ಯದ ವಿವಿಧೆಡೆಯಿಂದ ಸ್ಪರ್ಧೆಗೆ ಪ್ರವೇಶ ಪಡೆದಿದ್ದವು. ಇವುಗಳಲ್ಲಿ ತೀರ್ಪುಗಾರರು ಆಯ್ಕೆ ಮಾಡಿದ 13 ಕಿರುಚಿತ್ರಗಳನ್ನು ಬೆಳಿಗ್ಗೆ 10 ಗಂಟೆಯಿಂದ ಪ್ರದರ್ಶಿಸಲಾಗುವುದು. ಜೊತೆಗೆ ಆಯಾ ತಂಡಗಳನ್ನು ಪರಿಚಯಿಸಲಾಗುವುದು. ಸಂಜೆ ನಡೆಯುವ ಸಮಾರಂಭದಲ್ಲಿ ವಿಜೇತ ಚಿತ್ರಗಳನ್ನು ಘೋಷಣೆ ಮಾಡಲಾಗುವುದು ಎಂದರು. 

ಪ್ರತಿ ವರ್ಷದಂತೆ ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ 15 ಸಾವಿರ ಹಾಗೂ ತೃತೀಯ ಬಹುಮಾನ 10 ಸಾವಿರ ನಗದು ಪುರಸ್ಕಾರ ಹಾಗೂ ಆಕರ್ಷಣೀಯ ಫಲಕ ನೀಡಲಾಗುವುದು. ಜೊತೆಗೆ ಶ್ರೇಷ್ಠ ನಿರ್ದೇಶನ, ಕಥೆ, ಸಂಗೀತ, ಸಂಕಲನ, ಛಾಯಾಗ್ರಹಣ, ನಟ-ನಟಿ, ಪೋಷಕ ನಟ-ನಟಿ, ಬಾಲ ನಟ-ನಟಿ ತೀರ್ಪುಗಾರರ ವಿಶೇಷ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುವುದು ಎಂದರು. 

ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಸತ್ಯರವರು ಭಾಗವಹಿಸಿ ಚಿತ್ರ ತಯಾರಿ, ಚಿತ್ರ ಕಥೆ-ನಿರೂಪಣೆ, ತಂತ್ರಜ್ಞಾನ ಕುರಿತ ಕಾರ್ಯಗಾರ ನಡೆಸಿಕೊಡಲಿದ್ದಾರೆ ಎಂದರು.

Ajeya Image

ಸಂಜೆ 6 ಗಂಟೆಗೆ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಾಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಖ್ಯಾತ ಚಲನಚಿತ್ರ ನಿರ್ದೇಶಕ, ನಟ ಬಿ.ಸುರೇಶ್ ಭಾಗವಹಿಸಲಿದ್ದಾರೆ. ಸಮಾರಂಭದ ನಡುವೆ ನಗರದ ವಿವಿಧ ನೃತ್ಯ ತಂಡಗಳಿಂದ ಭರತ ನಾಟ್ಯ, ಜಾನಪದ ಹಾಗೂ ಪಾಶ್ಚಿಮಾತ್ಯ ಶೈಲಿಯ ಆಕರ್ಷಕ ನೃತ್ಯ ಪ್ರದರ್ಶನ ಮತ್ತು ಚಿತ್ರಗೀತೆಗಳ ಗಾಯನ ನಡೆಯಲಿದೆ ಎಂದರು.

ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡರು. 

ಶ್ರೀನಿವಾಸ್, ಕಿರಣ್, ಸಂತೋಷ್, ಜಿ.ವಿಜಯ್‌ಕುಮಾರ್, ಅನಂತ್, ಚೇತನ್, ಆಚಿ ಪ್ರಕಾಶ್ ಉಪಸ್ಥಿತರಿದ್ದರು.  

ಪದಗಂಟು :       
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©