ಶಿವಮೊಗ್ಗ 18 :
ಇಲ್ಲಿನ ಗೋಪಾಲಗೌಡ ಬಡಾವಣೆಯ ಮೋದಕ ಭವನ ಹೋಟೆಲ್, ಕೆಫೆ ಲೇಜಿ ಬೀ ಮತ್ತು ಮೆಗ್ಗಾನ್ ಬ್ಲಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಫೆ.20ರ ಶನಿವಾರ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಶಿಬಿರವು ಅಂದು ಬೆಳಿಗ್ಗೆ 9 ರಿಂದ ಸಂಜೆ 6ರ ವರೆಗೆ ಗೋಪಾಲಗೌಡ ಬಡಾವಣೆಯ 100 ಅಡಿ ರಸ್ತೆಯಲ್ಲಿರುವ ಮೋದಕ ಭವನ ಹೋಟೆಲ್ ಆವರಣದಲ್ಲಿ ನಡೆಯಲಿದ್ದು, ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
ಆಸಕ್ತರು ಮಾಹಿತಿಗಾಗಿ ಕೇಶವ್ ಮೂರ್ತಿ (ಮೊ: 98861 42804), ನಾಗರಾಜ್ (ಮೊ: 99766 33110) ಸಂಪರ್ಕಿಸಲು ಕೋರಿದೆ.
Image Courtesy : Internet
Designed, Developed and Maintained by PRABHAT SERVICES ™  , AJEYA KANNADA DAILY 2019 ©