ಶಿವಮೊಗ್ಗ, ಫೆ.19:
ಇಂದು ಬೆಳಿಗ್ಗೆಯಿಂದಲೇ ನಗರದೆಲ್ಲೆಡೆ ಹಿಮ ಕವಿದ ವಾತಾವರಣವಿದ್ದು, ಸಣ್ಣ ಪ್ರಮಾಣದ ಮಳೆಯಾಗಿದ್ದು, ನಗರದ ಎಲ್ಲೆಡೆ ಬೃಹತ್ ಆಕಾರದಲ್ಲಿ ಬೆಳೆದು ನಿಂತಿರುವ ಬೂದಲು ಮರದ ಕಾಯಿಗಳು ಕೆಳಗೆ ಬಿದ್ದು, ಅದರ ಮೇಲೆ ವಾಹನಗಳು ಸಂಚರಿಸಿದಾಗ ಅದರಿಂದ ಚೆಲ್ಲಿದ ಎಣ್ಣೆ ರಸ್ತೆಯೆಲ್ಲೆಡೆ ಹರಡಿದ್ದರಿಂದ ನಗರದ ನಂಜಪ್ಪ ಆಸ್ಪತ್ರೆ ಎದುರುಗಡೆ ಮತ್ತು ಸಾಗರ ರಸ್ತೆ ಬಿ ಎಸ್ ಎನ್ ಎಲ್ ಕಚೇರಿ ಬಳಿ ಅನೇಕ ದ್ವಿಚಕ್ರ ವಾಹನ ಸವಾರರು ಜಾರಿಬಿದ್ದು, ಗಾಯಗೊಂಡ ಘಟನೆ ನಡೆಯಿತು.
ಸುಮಾರು 20ಕ್ಕೂ ವಾಹನ ಸವಾರರು ಹಾಗೂ ಬೆಳಿಗ್ಗೆ ವಾಕಿಂಗ್ಗೆ ಬಂದ ಪಾದಚಾರಿಗಳೂ ಕೂಡ ಕಾಲುಜಾರಿ ಬಿದ್ದ ಘಟನೆ ನಡೆಯಿತು. ಬಳಿಕ ಸ್ಥಳದಲ್ಲಿದ್ದ ನಾಗರಿಕರು ಮತ್ತು ಆಟೋ ಚಾಲಕರು ತಾವೇ ಬ್ಯಾರಿಕೇಡ್ನ್ನು ನಂಜಪ್ಪ ಆಸ್ಪತ್ರೆ ಬಳಿ ರಸ್ತೆಗೆ ಅಡ್ಡಲಾಗಿಟ್ಟು, ಸಾರ್ವಜನಿಕರಿಗೆ ಮತ್ತು ದ್ವಿ ಚಕ್ರ ವಾಹನ ಸವಾರರಿಗೆ ಎಚ್ಚರಿಸುವ ಕಾರ್ಯ ಮಾಡಿದರು.
ಬೆಳಿಗ್ಗೆ ಕೆಲಸಕ್ಕೆ ಹೋಗುವ ಧಾವಂತದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವಂತಾಯಿತು.ಇಂತಹ ಮರದ ರಂಬೆಗಳನ್ನು ಕತ್ತರಿಸಿ, ಅಪಾಯವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮಹಾನಗರ ಪಾಲಿಕೆಯವರು ಸ್ಥಳಕ್ಕೆ ಧಾವಿಸಿ ರಸ್ತೆಯನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದರು. ಸಂಚಾರಿ ಪೋಲೀಸರು ಕೂಡ ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡುವ ಕೆಲಸ ಮಾಡಿ ಹೆಚ್ಚಿನ ಅಪಾಯ ತಪ್ಪಿಸಿದ್ದಾರೆ.
Designed, Developed and Maintained by PRABHAT SERVICES ™  , AJEYA KANNADA DAILY 2019 ©