Sunday 07 March 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಪಂಚಲೋಹ ಅಯ್ಯಪ್ಪ ವಿಗ್ರಹ, ಗೋಪುರ ಕಲಶ ಪ್ರತಿಷ್ಠಾಪನೆ

ಫೆ.20ರಂದು ಗೌರಿಗದ್ದೆಯ ವಿನಯ್‌ ಗುರೂಜಿಯವರು ಅಯ್ಯಪ್ಪ ಸ್ವಾಮಿ ವಿಗ್ರಹದ ಮತ್ತು ದೇವಾಲಯದ ಗೋಪುರ ಕಳಶ ಪ್ರತಿಷ್ಠಾಪನೆಯನ್ನು ನೆರವೇರಿಸಲಿದ್ದಾರೆ. ಅಂದು ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆ, ಹೋಮ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ

2021-02-19 05:30:00, ajeyanews.com

Ajeya Imageಶಿವಮೊಗ್ಗ, ಫೆ.19:
ಗೋಪಾಳದ ರಂಗನಾಥ ಬಡಾವಣೆಯ ಅಯ್ಯಪ್ಪಸ್ವಾಮಿ ಸೇವಾ ಪ್ರತಿಷ್ಠಾನಂ ವತಿಯಿಂದ ಫೆ.20 ಮತ್ತು 21ರಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನೂತನ ಪಂಚಲೋಹ ವಿಗ್ರಹ ಪ್ರತಿಷ್ಠಾಪನೆ ಮತ್ತು ಗೋಪುರ ಕಳಶ ಪ್ರತಿಷ್ಠಾಪನೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸುರೇಶ್ ಕೆ.ಬಾಳೆಗುಂಡಿ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 1.20 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಗೋಪುರ ಮತ್ತು ನೂತನ ಪಂಚಲೋಹ ವಿಗ್ರಹ ನಿರ್ಮಿಸಲಾಗಿದೆ. ಪಂಚಲೋಹ ವಿಗ್ರಹ ವಿಶೇಷವಾಗಿದ್ದು, ಇದರ ಅಂದಾಜು ವೆಚ್ಚವೆ 5 ಲಕ್ಷ ರೂ.ಆಗಿದೆ.ಅಯ್ಯಪ್ಪ ಸ್ವಾಮಿಯ ಪಂಚಲೋಹ ವಿಗ್ರಹ ಇರುವುದು ಅಪರೂಪವಾಗಿದೆ. ಸರ್ಕಾರದ ಅನುದಾನ ಭಕ್ತರ ದೇಣಿಗೆಗಳಿಂದ ಈ ಪ್ರತಿಷ್ಠಾಪನೆ ಮಹೋತ್ಸವ ನಡೆಯಲಿದೆ ಎಂದರು.

ಫೆ.20ರಂದು ಗೌರಿಗದ್ದೆಯ ವಿನಯ್‌ ಗುರೂಜಿಯವರು ಅಯ್ಯಪ್ಪ ಸ್ವಾಮಿ ವಿಗ್ರಹದ ಮತ್ತು ದೇವಾಲಯದ ಗೋಪುರ ಕಳಶ ಪ್ರತಿಷ್ಠಾಪನೆಯನ್ನು ನೆರವೇರಿಸಲಿದ್ದಾರೆ. ಅಂದು ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆ, ಹೋಮ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದ ಅವರು ರವೀಂದ್ರಭಟ್, ಮಂಜುನಾಥ ಭಟ್ ಅವರು ಇದರ ನೇತೃತ್ವವನ್ನು ವಹಿಸಲಿದ್ದಾರೆ ಎಂದರು.

ಫೆ.21ರಂದು ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮವಿದೆ. ವಿನಯ್‌ ಗುರೂಜಿ ಆಶೀರ್ವಚನ ನೀಡುವರು. ಹಿರಿಯ ಪ್ರಧಾನ ಗುರುಸ್ವಾಮಿ ರೋಜಾ ಷಣ್ಮುಗಂ ಸಾನಿಧ್ಯ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ಸಾಂಸದ ಬಿ.ವೈ.ರಾಘವೇಂದ್ರ, ಎಸ್. ದತ್ತಾತ್ರಿ, ಪಾಲಿಕೆ ಸದಸ್ಯ ಎನ್.ಎಸ್. ಮಂಜುನಾಥ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.

ಪ್ರಮುಖರಾದ ಬಿ.ಸಿ.ರಾಜಣ್ಣ, ಗೋಪಾಲಕೃಷ್ಣ, ಸುರೇಶಬಾಬು, ರುದ್ರೇಗೌಡ ಇದ್ದರು.


ಪದಗಂಟು :        
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©