ಶಿವಮೊಗ್ಗ, ಫೆ.20:
ನಮ್ಮ ಸುತ್ತಮುತ್ತಲಿನ ಕೆಲವು ಅಂಧ ಮೂಢನಂಬಿಕೆಗಳನ್ನು ತೊರೆದು ಹಾಕುವ ಕಾರ್ಯ ಮಹಿಳೆಯರಿಂದಾಗಲಿ ಎಂದು ಉಷಾ ನರ್ಸಿಂಗ್ ಹೋಂ ಪ್ರಸೂತಿ ತಜ್ಞ ಡಾ.ರಕ್ಷಾರಾವ್ ಅಭಿಪ್ರಾಯಪಟ್ಟರು.
ಎಸ್.ಆರ್. ನಾಗಪ್ಪ ಶೆಟ್ಟಿ ಸ್ಮಾರಕ ಅನ್ವಯಿಕ ವಿಜ್ಞಾನ ಕಾಲೇಜಿನ ವತಿಯಿಂದ ಕಾಲೇಜಿನ ಮಹಿಳಾ ಅಭಿವೃದ್ಧಿ ಸಮಿತಿ ಉದ್ಘಾಟಿಸಿ ಮಾತನಾಡಿದ ಅವರು ಹೆಣ್ಣು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ದೇಹದಲ್ಲಾಗುವ ನೈಸರ್ಗಿಕ ಬದಲಾವಣೆಗಳ ಕುರಿತು ಎದುರಾಗುವ ಮೌಢ್ಯತೆಯನ್ನು ದಿಟ್ಟತನದಿಂದ ಎದುರಿಸಬೇಕಿದೆ. ಇಂದಿನ ಬಹಳಷ್ಟು ಯುವತಿಯರು ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಮುಖ್ಯ ಕಾರಣ ಬದಲಾದ ಜೀವನ ಶೈಲಿ ಮತ್ತು ಕನಿಷ್ಟ ತಿಳಿವಳಿಕೆ ಕಾರಣ ಎಂದರು.
ಎಸ್ ಆರ್ ಎನ್ ಎಂ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಲ್. ಅರವಿಂದ, ಐಕ್ಯೂಎಸಿ ಮುಖ್ಯಸ್ಥ ಹೆಚ್.ಎಸ್. ದತ್ತಾತ್ರಿ, ಕಾಲೇಜಿನ ಮಹಿಳಾ ಅಭಿವೃದ್ಧಿ ಸಮಿತಿ ನೊಡಲ್ ಅಧಿಕಾರಿ ಉಮಾ ಸೋಮಶೇಖರ್, ಸದಸ್ಯರಾದ ಸಂಗಿದಾಬಾನು, ಸೌಖ್ಯ, ಶ್ವೇತ, ರಂಜಿತ, ವರ್ಷ, ಮಹಾಲಕ್ಷಿö್ಮÃ, ಸೀಮಾ, ಆಯಿಷಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©