ಶಿವಮೊಗ್ಗ, ಫೆ. 22:
ಶಿವಮೊಗ್ಗ ಬೆಳ್ಳಿಮಂಡಲ, ಯುಗಧರ್ಮಜಾನಪದ ಸಮಿತಿ, ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಂಬೆಗಾಲು-4 ಕಿರುಚಿತ್ರ ಸ್ಪರ್ಧೆಯಲ್ಲಿ ಶಿವು ಅಮೀನ್ ನಿರ್ದೇಶನದ ದೂರದರ್ಶನ ಕಿರುಚಿತ್ರ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ 25 ಸಾವಿರ ನಗದು ಪುರಸ್ಕಾರಕ್ಕೆ ಭಾಜನವಾಗಿದೆ.
ಜನಾರ್ಧನ ಮೌರ್ಯರವರಕಥೆ-ಸಂಭಾಷಣೆ-ನಿರ್ದೇಶನದದ ಬ್ಲೌಸ್ಕಿರುಚಿತ್ರ 15 ಸಾವಿರ ರೂಪಾಯಿಗಳ ದ್ವಿತೀಯ ಅತ್ಯುತ್ತಮ ಚಿತ್ರ, ಮಧು ಶಿವಮೊಗ್ಗರವರ ನಿರ್ದೇಶನದ ನೊಂದಯುವಕರ ಸಂಘ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಯೊಂದಿಗೆ 10 ಸಾವಿರ ರೂಪಾಯಿಗಳ ನಗದು ಪುರಸ್ಕಾರ, ಹಾಗೂ ವಿನಯ್ ಶಿವಗಂಗೆಯವರ ಸೌಮ್ಯ ಕಿರುಚಿತ್ರವು ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಪಾತ್ರವಾಗಿದೆ.
ಕುವೆಂಪು ರಂಗಮಂದಿರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಹೆಚ್. ಶಂಕರಮೂರ್ತಿ, ಶಿವಮೊಗ್ಗ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಕೈಗಾರಿಕಾಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್, ಡಾ. ರಜನಿ ಪೈ, ಡಾ. ಪ್ರೀತಿ ಪೈ, ಡಾ.ಶಾನಭಾಗ್, ಡಾ.ಕೆ.ಆರ್. ಶ್ರೀಧರ್, ವಿಜಯಾ ಶ್ರೀಧರ್ ಪ್ರದಾನ ಮಾಡಿದರು.
ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕ ಡಿ. ಎಸ್. ಅರುಣ್, ವೈದ್ಯ ಸೇರಿದಂತೆ ಶಿವಮೊಗ್ಗ ಬೆಳ್ಳಿಮಂಡಲ ಹಾಗೂ ಅಂಬೆಗಾಲು ತಂಡದಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಇನ್ನು ವೈಯಕ್ತಿಕ ವಿಭಾಗದಲ್ಲಿ ಶಿವು ಅಮೀನ್ (ಶ್ರೇಷ್ಠ ನಿರ್ದೇಶನ-ದೂರದರ್ಶನ), ಆದಿತ್ಯ ( ಶ್ರೇಷ್ಠ ಹಿನ್ನೆಲೆ ಸಂಗೀತ- ಆತಂಕ), ಕಾರ್ತಿಕ್ ಕಾಟು (ಶ್ರೇಷ್ಠ ಸಂಕಲನ- ಪ್ರಣಶ್ಯತಿ), ಗಣೇಶ್ ವಶಿಷ್ಟ (ಶ್ರೇಷ್ಠ ಚಿತ್ರಕಥೆ - ಬ್ಲೌಸ್), ಪೃಥ್ವಿಗೌಡ (ಅತ್ಯುತ್ತಮ ನಟ- ಪ್ರಣಶ್ಯತಿ ), ನಮಿತಾ ಕಿರಣ್ (ಅತ್ಯುತ್ತಮ ನಟಿ- ದೂರದರ್ಶನ), ಸುಮಿತ್ (ಅತ್ಯುತ್ತಮ ಬಾಲ ನಟ -ಸಿಂಡ್ರೆಲಾ), ವಿನಯ್ (ಅತ್ಯುತ್ತಮ ಪೋಷಕ ನಟ - ಆಪರೇಷನ್ ಅಂತಃಕರಣ), ಜಯಮ್ಮ (ಅತ್ಯುತ್ತಮ ಪೋಷಕ ನಟಿಃತುಂಗಜ್ಜಿ), ಸುಮಂತ್ಗೌಡ (ಅತ್ಯುತ್ತಮ ಛಾಯಾಗ್ರಹಣ -ಸಾಲು ಮರದತಿಮ್ಮಕ್ಕ) ರವರು ಪ್ರಶಸ್ತಿಗಳಿಗೆ ಪಾತ್ರರಾದರು.
ಈ ಬಾರಿಯಕಿರುಚಿತ್ರ ಸ್ಪರ್ಧೆಯಲ್ಲಿಒಟ್ಟು ೩೫ ಕಿರುಚಿತ್ರಗಳು ಸ್ಪರ್ಧೆಯಲ್ಲಿದ್ದು, ಅಂತಿಮ ಸುತ್ತಿನಲ್ಲಿ 13 ಚಿತ್ರಗಳು ಆಯ್ಕೆಯಾಗಿದ್ದವು.
Designed, Developed and Maintained by PRABHAT SERVICES ™  , AJEYA KANNADA DAILY 2019 ©