ಶಿವಮೊಗ್ಗ, ಫೆ.22:
ಇಂದಿನ ಐಟಿ ಕ್ಷೇತ್ರದಲ್ಲಿ ಬೃಹತ್ ಕಂಪನಿಗಳು ಬಿಗ್ ಡೇಟಾ ಅನಲಿಟಿಕ್ಸ್ ಕೌಶಲ್ಯಗಳನ್ನು ಬಳಸಿಕೊಂಡು ಡೇಟಾ ಡ್ರಿವನ್ ತೀರ್ಮಾನಗಳನ್ನು ಸಮರ್ಥವಾಗಿ ಅತೀ ಕಡಿಮೆ ಸಮಯದಲ್ಲಿ ತೆಗೆದುಕೊಳ್ಳುತ್ತಿವೆ. ಈ ಕ್ಷೇತ್ರದಲ್ಲಿ ಇಂದು ಬಿಗ್ ಡೇಟಾ ಅನಲಿಟಿಕ್ಸ್ನ ಅಲೆಯು ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದು ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಹ ಪ್ರಾಧ್ಯಾಪಕಿ ಸಂಧ್ಯಾ. ಆರ್ ಹೇಳಿದರು.
ನಗರದ ಪಿಇಎಸ್ ಐಎಎಮ್ಎಸ್ ಡಿಗ್ರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಕ್ಲಸ್ಟರ್ ಫೋರಂ ಅಡಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಡೇಟಾಗಳನ್ನು ವಿಶ್ಲೇಷಣೆ ಮಾಡುವುದು ಹಾಗೂ ಅವುಗಳನ್ನು ಶೇಖರಿಸಿ ನಿರ್ವಹಣೆ ಮಾಡುವ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು ಹಾಗೆಯೇ ಐಟಿ ಕಂಪನಿಗಳಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಕೌಶಲ್ಯಗಳನ್ನು ಕಲಿಯುವ ಅಗತ್ಯವಿದೆ. ಯಾವ ಕ್ಷೇತ್ರಗಳಲ್ಲಿ ಬಿಗ್ ಡೇಟಾ ಅನಲಿಟಿಕ್ಸ್ ಬಳಸುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡುವ ಜೊತೆಗೆ ಇದರ ಅನುಕೂಲತೆ ಮತ್ತು ಅನಾನುಕೂಲತೆಗಳ ಜೊತೆಗೆ ಇರುವಂತಹ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳು ಇವರ ಜೊತೆಗೆ ಸಂವಾದವನ್ನು ನಡೆಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಕೆ. ಸಾಯಿಲತಾ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಿ. ಎಸ್, ಕ್ಲಸ್ಟರ್ ಫೋರಂ ಸಂಚಾಲಕಿ ಅಶ್ವಿನಿ. ಈ. ಎಂ ಇದ್ದರು.
ನಿರೂಪಣೆಯನ್ನು ಲಾಯಲ್ ಡಿಸೋಜಾ, ಪ್ರಾರ್ಥನೆಯನ್ನು ಕು. ಮಧುರ. ಜಿ.ಪಿ ನಡೆಸಿಕೊಟ್ಟರು. ಕು. ಸಹನ ವಂದಿಸಿದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©