Sunday 07 March 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಸರ್ಕಾರಿ ಶಾಲೆಗೆ ಕಂಪ್ಯೂಟರ್ ಪ್ರಿಂಟರ್ ದಾನ

ಜೆಸಿಐ ಸಹ್ಯಾದ್ರಿ ಸಂಸ್ಥೆಯ ಕೊಡುಗೆ

2021-02-22 05:30:00, ajeyanews.com

Ajeya Image
ಶಿವಮೊಗ್ಗ, ಫೆ.22:
 ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸಮಾಜಸೇವೆಯಲ್ಲಿ ನಿರತರಾಗಿರುವ ಸಂಘ ಸಂಸ್ಥೆಗಳು ನೆರವು ನೀಡಿದಲ್ಲಿ ಮಾದರಿ ಶಾಲೆಯಾಗಿ ರೂಪಿಸಬಹುದು ಎಂದು ಜೆಸಿ ಕಿಶೋರ್ ಹೇಳಿದರು.

ಬೀರನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಮೊಗ್ಗ ಜೆಸಿಐ ಸಹ್ಯಾದ್ರಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಗೆ ಕಂಪ್ಯೂಟರ್ ಪ್ರಿಂಟರ್ ವಿತರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಇದರಿಂದ ಬಡ ಮತ್ತುಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಪ್ರಯೋಜನವಾಗುತ್ತದೆ. ಮಕ್ಕಳಿಗೆ ಅಗತ್ಯ ನೆರವು ನೀಡುವಲ್ಲಿ ಎಲ್ಲರೂ ಮುಂದಾಗಬೇಕು ಎಂದರು.

ರೋಟೆರಿಯನ್ ಜಿ. ವಿಜಯ್‌ಕುಮಾರ್ ಮಾತನಾಡಿ, ಮಕ್ಕಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ಎಲ್ಲ ಸರ್ಕಾರಿ ಶಾಲೆಗಳಲ್ಲಿಯೂ ಬರಬೇಕು.ಇದರಿಂದ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚುವ ಜತೆಯಲ್ಲಿ, ಅವರ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ಜೆಸಿ ಜೋನಲ್ ವೈಸ್‌ಪ್ರೆಸಿಡೆಂಟ್ ಅನುಷ್‌ಗೌಡ, ಕಾರ್ಯದರ್ಶಿ ಸತೀಶ್‌ಚಂದ್ರ, ಜೆಸಿಆರ್‌ಟಿ ವೀಣಾಕಿಶೋರ್, ಜೆಸಿ ಗೋಪಾಲನಾಯಕ, ಜೆಸಿ ಮಂಜುನಾಥ್ ಉಪಸ್ಥಿತರಿದ್ದರು.

ಪ್ರಿಂಟರ್‌ಅನ್ನುಕೊಡುಗೆ ನೀಡಿದ ಜೆಸಿ ಮಂಜುನಾಥ್, ಮಾಲೀಕರು ಸಹ್ಯಾದ್ರಿಆಟೋಮೇಷನ್‌ಅವರನ್ನು ಸನ್ಮಾನಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ನಾಯಕ್, ಮುಖ್ಯ ಶಿಕ್ಷಕ ಬಸವರಾಜ್ ಹಿರೇಮಠ್, ಸಿಆರ್‌ಪಿ ಬಸವರಾಜ್, ಸಿದ್ದಪ್ಪ, ಶೋಭಾಕೆಎಸ್, ರೇಷ್ಮಾ, ಕೆ.ಆರ್. ಬಿಂದು ಸಹಶಿಕ್ಷಕರು ಶಾಲಾಭಿವೃದ್ಧಿ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದರು.

ಪದಗಂಟು :        
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©