Sunday 07 March 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಫೆ.26-27: ವರ್ಷ ವೈಭವ ನೃತ್ಯ ಮಹೋತ್ಸವ

2021-02-22 05:30:00, ajeyanews.com

Ajeya Image
ಶಿವಮೊಗ್ಗ, ಫೆ.22:
 ಶ್ರೀವಿಜಯ ಕಲಾನಿಕೇತನದ ವತಿಯಿಂದ 16 ನೇ ವರ್ಷದ ವರ್ಷ ವೈಭವ -2021 ಶಾಸ್ತ್ರೀಯ ನೃತ್ಯ ಮಹೋತ್ಸವ ಫೆ.26-27ರಂದು ಸಂಜೆ 6 ಗಂಟೆಗೆ ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ನಡೆಯಲಿದೆ. 

ಫೆ.26ರಂದು ಶ್ರೀವಿಜಯದ ವಿದ್ಯಾರ್ಥಿಗಳಿಂದ ನಿರೂಪಣೆ ಮತ್ತು ಮಾರ್ಗಂ ಎಂಬ ಸಾಂಪ್ರದಾಯಿಕ ಪಂದನಲ್ಲೂರು ಶೈಲಿಯನ್ನಾಧರಿಸಿದ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮದ ಮೊದಲದಿನ ಖ್ಯಾತ ಲೇಖಕ ಪ್ರೊ. ತಿರುಮಲ ಮಾವಿನಕುಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಸಂಘದ ಪೂರ್ವಾಧ್ಯಕ್ಷೆ ವಿಜಯಾ ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಫೆ.27ರಂದು ಸಂಜೆ 6 ಗಂಟೆಗೆ ಡಾ. ಕೆ.ಎಸ್.ಪವಿತ್ರಾ, ಡಾ. ವಿ.ಕೃ.ಗೋಕಾಕ್ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ ಆಧರಿಸಿದ ನೃತ್ಯ ಪ್ರಸ್ತುತಿ ‘ಭಾರತ ಸಿಂಧು ರಶ್ಮಿ’ ಯನ್ನು ಪ್ರದರ್ಶಿಸಲಿದ್ದಾರೆ. ಕುವೆಂಪು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಿ.ಪಿ. ವೀರಭದ್ರಪ್ಪ ಅವರು ಭಾಗವಹಿಸಲಿದ್ದಾರೆ. ಶ್ರೀವಿಜಯದ ಅಧ್ಯಕ್ಷ ಡಾ. ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ. 

ಈ ಎರಡೂ ಕಾರ್ಯಕ್ರಮಗಳು ನೇರ ಹಿಮ್ಮೇಳ ಸಂಗೀತವನ್ನು ಒಳಗೊಂಡಿರುತ್ತದೆ. ನೃತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀವಿಜಯ ಕೋರುತ್ತದೆ. 

ಪದಗಂಟು :      
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©