ಶಿವಮೊಗ್ಗ, ಫೆ.22:
ರಾಜ್ಯದಲ್ಲಿ ಸುಮಾರು 20 ರ ಸಂಖ್ಯೆಯಲ್ಲಿ ಕುಂಬಾರ ಸಮಾಜ ಬಾಂಧವರಿದ್ದು, ಸಾಮಾಜಿಕ ನ್ಯಾಯದ ನೆಲೆಯಲ್ಲಿ ಬೇರೆ ಜನಾಂಗದವರಿಗೆ ಹಾಗೂ ವೃತ್ತಿಯವರಿಗೆ ಕೊಡುವಂತೆ ಈ ಸಮಾಜಕ್ಕೆ ಸ್ವತಂತ್ರ ಕುಂಭ ಕಲಾ ನಿಗಮ ಮಂಜೂರು ಮಾಡುವಂತೆ ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಕೆ.ಜಿ. ಪದ್ಮನಾಭ, ಪ್ರಧಾನ ಕಾರ್ಯದರ್ಶಿ ಕೆ.ಟಿ. ರವೀಂದ್ರ, ಉಪಾಧ್ಯಕ್ಷ ಎಂ.ಕೆ. ಶ್ರೀನಿವಾಸ್ ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.
ದೇವರಾಜು ಅರಸು ನಿಗಮದಿಂದ ಬೇರ್ಪಡಿಸಿ, ಸ್ವತಂತ್ರ ಕುಂಭಕಲಾ ನಿಗಮ ಸ್ಥಾಪಿಸಿ ಸಮಾಜದ ಗಣ್ಯರಿಗೆ ಅಧ್ಯಕ್ಷರನ್ನಾಗಿ ನೇಮಿಸಬೇಕು. ಹಾಗೆಯೇ ಕುಂಭಕಲಾ ನಿಗಮಕ್ಕೆ ಬಜೆಟ್ನಲ್ಲಿ ಹಣಕಾಸು ನಿಗದಿಪಡಿಸಬೇಕು. ಜೊತೆಗೆ ಸರ್ವಜ್ಞ ಪ್ರಾಧಿಕಾರಕ್ಕೆ ಕುಂಬಾರ ಸಮಾಜದ ಗಣ್ಯರನ್ನು ನೇಮಿಸುವಂತೆ ಸಿಎಂ ಬಿಎಸ್ವೈರನ್ನು ಕೋರಿದ್ದಾರೆ. ಕೊನೆಯದಾಗಿ ಕುಂಬಾರರನ್ನು 2ಎ ಗುಂಪಿನಲ್ಲಿ ಸೇರ್ಪಡೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.
Designed, Developed and Maintained by PRABHAT SERVICES ™  , AJEYA KANNADA DAILY 2019 ©