ಶಿವಮೊಗ್ಗ, ಫೆ.22:
ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲ್ಲಿರುವ ಕೇರಳ ಸಮಾಜಂನ ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮ ಫೆ.23ರಂದು ಬೆಳಿಗ್ಗೆ 9ಗಂಟೆಗೆ ವಾಜಪೇಯಿ ಬಡಾವಣೆಯಲ್ಲಿರುವ ಕೇರಳ ಸಮಾಜಂ ನಿವೇಶನದಲ್ಲಿ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಕೆ.ಚಂದ್ರಶೇಖರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇರಳ ಸಮಾಜವು ಕಳೆದ 40ವರ್ಷಗಳಿಂದ ಶಿವಮೊಗ್ಗದಲ್ಲಿ ಕೆಲಸ ನಿರ್ವಹಿಸುತ್ತಾ ಬಂದಿದೆ. ಸಣ್ಣ ಸಮಾಜವಾಗಿದ್ದು, ಎಲ್ಲ ರಂಗಗಳಲ್ಲಿಯೂ ಹಿಂದೆ ಉಳಿದಿದೆ. ಸಮುದಾಯಕ್ಕೆ ಅನುಕೂಲವಾಗಲು ಎಂಬ ದೃಷ್ಟಿಯಿಂದ ಸ್ಬುಡಾದ ಸಹಕಾರದಲ್ಲಿ ನಿವೇಶನ ಪಡೆಯಲಾಯಿತು. ಸರ್ಕಾರ 25 ಲಕ್ಷ ರೂ. ಅನುದಾನ ಕೂಡ ನೀಡಿದೆ. ಇದನ್ನು ಬಳಸಿಕೊಂಡು ಮತ್ತಷ್ಟು ನೆರವನ್ನು ಪಡೆದು ಸಮುದಾಯ ಭವನ ನಿರ್ಮಿಸಲಾಗುವುದು ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬರುವ ನಿರೀಕ್ಷೆ ಇದೆ. ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಂಕುಸ್ಥಾಪನೆ ನೆರವೇರಿಸುವರು. ವಿಶೇಷ ಆಹ್ವಾನಿತರಾಗಿ ಜಲಸಂಪನ್ಮೂಲ ಸಚಿವ ರಮೇಶ್ ಎಲ್. ಜಾರಕಿಹೊಳಿ ಭಾಗವಹಿಸಲಿದ್ದಾರೆ. ಹಾಗೆಯೇ ಸಾಂಸದ ಬಿ.ವೈ. ರಾಘವೇಂದ್ರ ಮತ್ತು ಶಾಸಕ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಆರ್.ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಸಿ.ಎಂ. ಇಬ್ರಾಹಿಂ, ಎಸ್.ಎಲ್. ಭೋಜೇಗೌಡ, ರುದ್ರೇಗೌಡ, ಭಾರತೀ ಶೆಟ್ಟಿ ಹಾಗೂ ಪ್ರಮುಖರಾದ ಡಿ.ಎಸ್.ಅರುಣ್, ಕೆ.ಎಸ್.ಗುರುಮೂರ್ತಿ, ಆನಂದ್, ಸುವರ್ಣಾ ಶಂಕರ್, ಜ್ಯೋತಿ ಎಸ್.ಕುಮಾರ್, ಗೀತಾ ಜಯಶೇಖರ್, ಪವಿತ್ರಾ ರಾಮಯ್ಯ, ಲತಾ ಗಣೇಶ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಕೇರಳ ಸಮಾಜದ ಪ್ರಮುಖರಾದ ಪ್ರದೀಪ್ ಮೆಥಲ್, ವಿ. ಗಿರೀಶ್ ಕುಮಾರ್, ಸುಬ್ರಹ್ಮಣಿ, ಸುರೇಶ್ ಕುಮಾರ್, ನಿರ್ಮಲಾ ಕಾಶಿ, ವನಜಾಕ್ಷಿ, ಜಾಯ್ ವರ್ಗಿಸ್, ಕೆ. ರಾಮಕೃಷ್ಣ ಸೇರಿದಂತೆ ಹಲವರಿದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©