ಶಿವಮೊಗ್ಗ, ಫೆ.22:
ಸ್ಮಶಾನ ಜಾಗ ಉಳಿಸಿಕೊಡುವಂತೆ ಮಿಳಘಟ್ಟದ ಭೋವಿ ಹಾಗೂ ಹರಿಜನ ಸಮುದಾಯದವರು ಇಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಗೋಪಾಳದ ಮುಖ್ಯ ರಸ್ತೆಯ ಸರ್ವೆ ನಂ.23 ರಲ್ಲಿ ಸುಮಾರು 2.04 ಎಕರೆ ಜಾಗದಲ್ಲಿ ಸುಮಾರು 150 ವರ್ಷಗಳಿಂದ ಭೋವಿ ಮತ್ತು ಹರಿಜನ ಸಮುದಾಯದವರಿಗಾಗಿ ಸ್ಮಶಾನವಿದ್ದು, ಹೀಗ ಸ್ಮಶಾನದ ಸುತ್ತಲೂ ಕಾಂಪೌಂಡ್ ಕಟ್ಟಲಾಗುತ್ತಿದೆ. ಆದರೆ ಈ ಭಾಗದ ಕಾರ್ಪೋರೇಟರ್ ಮೆಹಕ್ ಷರೀಫ್ ಅವರ ಪತಿ ಆಸೀಫ್ ಅವರು ಕಾಂಪೌಂಡ್ ಕಟ್ಟಲು ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೇ ಸ್ಮಶಾನದ ಮಧ್ಯ ಭಾಗದಲ್ಲಿ ರಸ್ತೆ ನಿರ್ಮಿಸಬೇಕೆಂದು ತಕರಾರು ಮಾಡುತ್ತಿದ್ದಾರೆ ಎಂದು ಮನವಿದಾರರು ಆರೋಪಿಸಿದರು.
ಅನಾದಿಕಾಲದಿಂದಲೂ ಇದೊಂದೆ ಸ್ಮಶಾನ ನಮಗಿರುತ್ತದೆ. ಆದರೆ, ಇದನ್ನು ಕೂಡ ಬಿಡುತ್ತಿಲ್ಲ. ಅಲ್ಲದೆ ಸ್ಮಶಾನದ ಜಾವನ್ನು ಅಕ್ಕಪಕ್ಕದವರೆಲ್ಲ ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ಅಳತೆ ಮಾಡಿಸಿ ಒತ್ತುವರಿ ತೆರವುಗೊಳಿಸಬೇಕು ಮತ್ತು ಕಾಂಪೌಂಡ್ ಕಟ್ಟಲು ಅಡ್ಡಿ ಮಾಡಬಾರದು. ಸ್ಮಶಾನದ ಮಧ್ಯೆ ರಸ್ತೆ ನಿರ್ಮಾಣವಾಗಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಯಲ್ಲಪ್ಪ, ಪ್ರಕಾಶ, ರವಿ, ಗಣೇಶ, ದೇವರಾಜ್, ಹನುಮಂತಪ್ಪ, ನಾಗರಾಜ್, ಚಂದ್ರ, ಮೂರ್ತಿ, ಕೃಷ್ಣಮೂರ್ತಿ, ಭುವನೇಶ್ವರಿ ಸೇರಿದಂತೆ ಹಲವರಿದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©