Thursday 22 April 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಭಾವಾಭಿನಂದನ ಯಶಸ್ವಿ; ಜನತೆಗೆ ಕೃತಜ್ಞತೆ

2021-03-02 05:30:00, ajeyanews.com

Ajeya Image
ಶಿವಮೊಗ್ಗ, ಮಾ.2:

ಬಿ.ಎಸ್.ಯಡಿಯೂರಪ್ಪನವರ ಅಭಿನಂದನಾ ಸಮಿತಿ ವತಿಯಿಂದ ಹಳೆಯ ಜೈಲ್ ಆವರಣದಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿದ್ದ ಸಮಷ್ಟಿ ಪ್ರಜ್ಞೆಯ ಜನನಾಯಕ ಬಿ.ಎಸ್.ವೈ. ರವರಿಗೆ ನಮ್ಮೊಲುಮೆ ಅಭಿಮಾನದ ಅಭಿನಂದನೆ ಹಾಗೂ ಭಾವಾಭಿನಂದನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಜಿಲ್ಲೆಯ ನಾಗರೀಕರಿಗೆ, ವಿವಿಧ ಸಮಾಜ ಮತ್ತು ಸಂಘ ಸಂಸ್ಥೆಗಳಿಗೆ ಸಮಿತಿಯ ಅಧ್ಯಕ್ಷ ಎಸ್.ರುದ್ರೇಗೌಡ ಅಭಿನಂದಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಡಿನ ಹೆಮ್ಮೆಯ ಅಭಿವೃದ್ಧಿಯ ಹರಿಕಾರ, ಸರ್ವಜನ ಹಿತಚಿಂತಕ, ಜಿಲ್ಲೆಯ ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ ಹಾಗೂ ಸಮಗ್ರ ಅಭಿವೃದ್ಧಿಯ ರೂವಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರಿಗೆ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ಅಭಿನಂದಿಸಬೇಕು ಎಂದು 1 ತಿಂಗಳಿನಿಂದ ಚಿಂತನೆ ಮಾಡಿ ರೂಪುಗೊಂಡ ಈ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದರು.

ಈ 2 ದಿನದ ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಜನರು ಯಡಿಯೂರಪ್ಪನವರಿಗೆ ಒಲವು ತೋರಿಸುವುದರ ಮೂಲಕ ಭಾಗವಹಿಸಿ ಆಶೀರ್ವದಿಸಿದ್ದಾರೆ.  2 ದಿನವು ಯಡಿಯೂರಪ್ಪನವರು ಭಾಗವಹಿಸಿದ್ದರು ಎಂದ ಅವರು ಅವರ ಹುಟ್ಟು ಹಬ್ಬದ ನೆಪ ಮಾಡಿಕೊಂಡು ಈ ಸಮಾರಂಭವನ್ನು ಆಯೋಜಿಸಿದ್ದು, ಒಂದು ದೊಡ್ಡ ತಂಡದ ಪರಿಶ್ರಮದಿಂದಾಗಿ ಈ ಕಾರ್ಯಕ್ರಮ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿದೆ ಎಂದರು. 

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ಕಡಿಮೆ ಸಮಯದಲ್ಲಿ ಈ ಕಾರ್ಯಕ್ರಮ ರೂಪುಗೊಂಡಿದ್ದು, ಎಲ್ಲರೂ ಕೈಜೋಡಿಸಿದ್ದರಿಂದ ಚೆನ್ನಾಗಿ ಮೂಡಿಬಂದಿದ್ದು, ಎಲ್ಲಾ ಸಮಾಜದವರು, ಸಂಘ ಸಂಸ್ಥೆಗಳು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಬೆಂಬಲ ಸೂಚಿಸಿದ್ದರಿಂದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ವಿಯಾಗಿದೆ ಎಂದರು.

ಡಿ.ಎಸ್.ಅರುಣ್, ಎಸ್.ಎಸ್.ಜ್ಯೋತಿಪ್ರಕಾಶ್, ಬಳ್ಳೆಕೆರೆ ಸಂತೋಷ್, ಸತೀಶ್, ದಿವಾಕರ ಶೆಟ್ಟಿ, ರಾಜೇಶ್ ಕಾಮತ್, ಮಂಜುನಾಥ್, ಮೋಹನ್ ಇನ್ನಿತರರು ಉಪಸ್ಥಿತರಿದ್ದರು. 

ಪದಗಂಟು :       
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©