Thursday 22 April 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಶೀಘ್ರ ತೀರ್ಮಾನ: ಮಧು

2021-03-02 05:30:00, ajeyanews.com

Ajeya Image
ಶಿವಮೊಗ್ಗ, ಮಾರ್ಚ್ 2:

ಜಿಪಂ ಚುನಾವಣೆಯ ಒಳಗೆ ತಾವು ಕಾಂಗ್ರೆಸ್ ಪಕ್ಷ ಸೇರುವುದರ ಬಗ್ಗೆ ಸ್ಪಷ್ಟ ತೀರ್ಮಾನವನ್ನು ತೆಗೆದುಕೊಳ್ಳುವೆ ಆದರೆ ಇದು ನನ್ನ ಬದಲಾವಣೆಯ ಬರ್ತಡೇ ಆಗಿದೆ ಎಂದು ಜೆಡಿಎಸ್ ಮುಖಂಡ ಸೊರಬ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

ಅವರು ಇಂದು ಕಲ್ಲಹಳ್ಳಿಯಲ್ಲಿರುವ ತಮ್ಮ ಮನೆಯಲ್ಲಿ ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 

ಆದಷ್ಟು ಬೇಗ ನನ್ನ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುವೆ ನಾನಿನ್ನು ಗೊಂದಲದಲ್ಲಿದ್ದೇನೆ. ಕಾಂಗ್ರೆಸ್ ಸೇರಿಲ್ಲ, ಜೆಡಿಎಸ್ ಬಿಟ್ಟಿಲ್ಲ ಒಳ್ಳೆಯ ಅವಕಾಶಕ್ಕೆ  ಕಾಯುತ್ತಿದ್ದೇನೆ. ರಾಷ್ಟ್ರೀಯ ಮುಖಂಡರಾದ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ ನನಗೆ ಯಾವ ನೋವು ಆಗಿಲ್ಲ. ಅವರ ಬಗ್ಗೆ ನನಗೆ ಅಪಾರ ಪ್ರೀತಿ ಇದೆ. ನನ್ನ ಬೆಳಸಿದವರೇ ಅವರು. ಆದರೆ ಆ ಪಕ್ಷದ ಕೆಲವರಿಂದ ನನಗೆ ನೋವಾಗಿದೆ ಮತ್ತು ಪಕ್ಷದಲ್ಲಿ ಕೆಲವು ತಪ್ಪುಗಳು ಆಗಿವೆ ಎಂದು ದೇವೇಗೌಡರು ಮತ್ತು ಕುಮಾರಸ್ವಾಮಿಯವರೆ ಒಪ್ಪಿಕೊಂಡಿದ್ದಾರೆ ಎಂದರು. 

ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಎಸ್.ಸುಂದರೇಶ್, ಕಲಗೋಡು ರತ್ನಾಕರ್, ಎನ್.ರಮೇಶ್, ವೇದಾ ವಿಜಯ್‌ಕುಮಾರ್, ವಿಜಯ್‌ಕುಮಾರ್, ಜಿ.ಡಿ.ಮಂಜುನಾಥ್, ಎಸ್.ಪಿ.ದಿನೇಶ್, ಶ್ರೀಧರ್ ಹುಲ್ತಿಕೊಪ್ಪ, ದಿನಬಂಧು ರಮೇಶ್, ಪಾಲಾಕ್ಷಿ, ಸುರೇಶ್ ಶೆಟ್ಟಿ ಸೇರಿದಂತೆ ಹಲವರಿದ್ದರು. 

ಪದಗಂಟು :      
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©