Thursday 22 April 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

31 ತ್ರಿಚಕ್ರವಾಹನ ವಿತರಣೆ

2021-03-02 05:30:00, ajeyanews.com

Ajeya Image
ಶಿವಮೊಗ್ಗ, ಮಾ.2:
ಮಹಾನಗರ ಪಾಲಿಕೆ ವತಿಯಿಂದ ಇಂದು ವಿಕಲ ಚೇತನರ ಕಲ್ಯಾಣ ಯೋಜನೆ ಅಡಿಯಲ್ಲಿ 31 ಫಲಾನುಭವಿಗಳಿಗೆ ತ್ರಿ ಚಕ್ರ ವಾಹನವನ್ನು ವಿತರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪನವರು ವಿಕಲಚೇತನರಿಗೆ ಕೀಯನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎಸ್.ಎಫ್.ಸಿ. 2018-19 ಮುಕ್ತ ನಿಧಿ 8.4 ಲಕ್ಷ, ಎಸ್. ಎಫ್‌ಸಿ 2019-20 ಮುಕ್ತ ನಿಧಿ 15.36 ಲಕ್ಷ, ಮಹಾನಗರ ಪಾಲಿಕೆ ನಿಧಿ 2.48 ಲಕ್ಷ, ಒಟ್ಟು 25.94 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿದ್ದು, ಅದರಲ್ಲಿ ಟೆಂಡರ್ ಮೊತ್ತ 25.94 ಲಕ್ಷ ರೂ.ಗಳಲ್ಲಿ ಅನುಮೋದನೆಗೊಂಡ ಮೊತ್ತ 25.82 ಲಕ್ಷ ರೂ. ಒಟ್ಟು ಖರೀದಿಸಿದ ತ್ರಿ ಚಕ್ರ ವಾಹನಗಳು 33, ಟೆಂಡರ್ ಪಡೆದ ಸಂಸ್ಥೆ ಶಿವಮೊಗ್ಗ ಶಾಂತಿ ಏಜೆನ್ಸಿಯಾಗಿದ್ದು, ಇಂದು ವಿವಿಧ ವಾರ್ಡುಗಳ 31 ಫಲಾನುಭವಿಗಳಿಗೆ ವಾಹನ ವಿತರಿಸಲಾಯಿತು.

ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಜ್ಞಾನೇಶ್ವರ್, ಧೀರರಾಜ್ ಹೊನ್ನವಿಲೆ, ಟಿ.ವಿಶ್ವಾಸ್, ಯಮುನಾ ರಂಗೇಗೌಡ, ಆರ್.ಸಿ.ನಾಯಕ್,  ಶಂಕರ್ ಗನ್ನಿ, ಆರತಿ ಹಾ.ಮ. ಪ್ರಕಾಶ್, ಸುನಿತಾ ಅಣ್ಣಪ್ಪ ಇದ್ದರು. 

ಪದಗಂಟು :     
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©