Thursday 22 April 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಜೆಎನ್‌ಎನ್‌ಸಿಇ ಕಾಲೇಜು - ಎನ್‌ಹೆಚ್‌ಎ ಮಹತ್ವದ ಒಡಂಬಡಿಕೆ

ನಗರದ ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜು ಮತ್ತು ಭಾರತ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

2021-03-03 05:30:00, ajeyanews.com


Ajeya Imageಶಿವಮೊಗ್ಗ ಮಾ,3:
ನಗರದ ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜು ಮತ್ತು ಭಾರತ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಒಡಂಬಡಿಕೆಯ ಮೂಲಕ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಬೋಧಕ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕತೆಯ ಜೊತೆಗೆ ಪ್ರಸ್ತುತ ಹೆದ್ದಾರಿ ಮತ್ತು ಸಾರಿಗೆ ಕ್ಷೇತ್ರದಲ್ಲಿನ ಹಲವು ಬೆಳವಣಿಗೆಗಳು ತಿಳಿಯಲು ಮತ್ತು ನೂತನ ಯೋಜನೆಗಳಿಗೆ ಪ್ರಾಧಿಕಾರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಿದೆ.

ಇದರ ಜೊತೆಗೆ ಕಾಲೇಜಿನ ಆವರಣದಲ್ಲಿ ಹೆದ್ದಾರಿ ಮತ್ತು ಸಾರಿಗೆ ಕ್ಷೇತ್ರದ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ರಸ್ತೆಗಳ ಗುಣಮಟ್ಟ ಸುಧಾರಣೆ ಸೇರಿದಂತೆ ಪ್ರಾಧಿಕಾರ - ತಜ್ಞರೊಂದಿಗೆ ಹಲವು ಆಯಾಮಗಳ ಕುರಿತು ಸಂಶೋಧನೆಗಳು ಇಲ್ಲಿ ನಡೆಯಲಿವೆ. ಇದರ ಸಂಪೂರ್ಣ ಪ್ರಾಯೋಜಕತ್ವವನ್ನು ಎನ್‌ಹೆಚ್‌ಎಐ ವಹಿಸಲಿದೆ. 

ಪ್ರತಿ ವರ್ಷ ಕಾಲೇಜಿನ ಹಲವು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎನ್.ಹೆಚ್.ಎ.ಐ ಇಂಟರ್ನ್‌ಶಿಪ್ ನೀಡಲಿದ್ದು ಪದವಿ ವಿದ್ಯಾರ್ಥಿಗಳಿಗೆ ರೂ.6,500ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರೂ.10,000ರೂಪಾಯಿಗಳ ಸಹಾಯ ಧನ ದೊರೆಯಲಿದೆ.

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 206 ರ ಬೆಟ್ಟದಹಳ್ಳಿಯಿಂದ ಶ್ರೀರಾಂಪುರ ವರೆಗಿನ ಸುಮಾರು 56.35ಕಿ.ಮೀ ಹೆದ್ದಾರಿ ಕಾಮಗಾರಿ ನಿರ್ವಹಣೆಯನ್ನು ಜೆ.ಎನ್.ಎನ್.ಸಿ.ಇ ಕಾಲೇಜು ಸಾಮಾಜಿಕ ಜವಬ್ದಾರಿಯಾಗಿ ಅಳವಡಿಸಿಕೊಳ್ಳಲಿದ್ದು, ಕಾಮಗಾರಿಯ ಗುಣಮಟ್ಟ ಕಾಪಾಡುವ ಹಿನ್ನಲೆಯಲ್ಲಿ ಪ್ರಾಧಿಕಾರದೊಂದಿಗೆ ಕೂಡಿ ಕಾರ್ಯ ನಿರ್ವಹಿಸಲಿದೆ.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹಕಾರದೊಂದಿಗೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಮಂಜುನಾಥ, ಇನ್ಫ್ರಾಸ್ಟ್ರಕ್ಷರ್ ಡೀನ್ ಡಾ.ಎಂ.ಎಂ.ರಜತ್ ಹೆಗಡೆ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಎಸ್.ಕಾರ್ತಿಕ್, ಸಹ ಪ್ರಾದ್ಯಾಪಕರಾದ ವಿ.ಅರುಣ್ ರವರ ನೇತೃತ್ವದಲ್ಲಿ ಈ ಯೋಜನೆ ಮುನ್ನಡೆಯಲಿದೆ.

ವಿದ್ಯಾರ್ಥಿಗಳಿಗೆ ಎನ್.ಹೆಚ್.ಎ.ಐ ನಡೆಸುವ ನೇರ ಯೋಜನೆಗಳೊಂದಿಗೆ ತೊಡಗಿಸಿಕೊಳ್ಳಲು ಹಾಗೂ ಕ್ಷೇತ್ರದ ನುರಿತ ತಜ್ಞರೊಂದಿಗೆ ಹೊಸ ವಿಷಯಗಳನ್ನು ಕಲಿಯಲು ಈ ಯೋಜನೆ ಪೂರಕ ವೇದಿಕೆಯಾಗಿದೆ. ಉದ್ಯಮ ಮತ್ತು ಶೈಕ್ಷಣಿಕತೆಯ ನಡುವಿನ ಅಂತರವನ್ನು ಕಡಿಮೆಗೊಳಿಸುವ ಮೂಲಕ ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಕಲಿಕಾ ದಕ್ಷತೆಯನ್ನು ಹೆಚ್ಚಿಸಲಿದೆ.

ಪದಗಂಟು :         
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©