ಶಿವಮೊಗ್ಗ, ಮಾರ್ಚ್ 3:
ಕರ್ನಾಟಕ ಸರ್ಕಾರ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ವತಿಯಿಂದ ಬಾಲ ಗೌರವ ಪ್ರಶಸ್ತಿ ಶಿವಮೊಗ್ಗದ ವಿದ್ಯಾರ್ಥಿನಿ ಸ್ನೇಹಶ್ರೀ ಅವರಿಗೆ ಚಿತ್ರಕಲಾ ವಿಭಾಗದಲ್ಲಿ ಲಭಿಸಿದೆ. ಪ್ರಶಸ್ತಿಯನ್ನು ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ್ ಹೊರಟ್ಟಿ, ಕರ್ನಾಟಕ ಬಾಲ ಅಕಾಡೆಮಿ ಅಧ್ಯಕ್ಷ ಈರಣ್ಣ, ಕಿಕ್ಕೇರಿ ಕೃಷ್ಣಮೂರ್ತಿ ಇನ್ನು ಮುಂತಾದವರು ಇದ್ದರು.
ಸ್ನೇಹ ಕುರಿತು
ಶಿವಮೊಗ್ಗ ನಿವಾಸಿಗಳಾದ ಗಿರೀಶ್ ಹಾಗೂ ಮಾಲಿನಿ ಗಿರೀಶ್ ದಂಪತಿಗಳ ಪುತ್ರಿಯಾದ ಸ್ನೇಹ ವಾಸವಿ ಶಾಲೆಯಲ್ಲಿ ಪ್ರೌಢ ಶಾಲೆ ವ್ಯಾಸಂಗ ಮಾಡಿ ಪ್ರಸ್ತುತ ಶಿವಮೊಗ್ಗದ ವಿದ್ಯಾಭಾರತಿ ಕಾಲೇಜ್ ನಲ್ಲಿ ಪ್ರಥಮ ಪಿಯು ಓದುತ್ತಿದ್ದಾರೆ.
ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಶ್ರೀಧರ ಕಂಬಾರ್ ಸರ್ ಅವರ ಬಳಿ ಚಿತ್ರಕಲೆ ಯನ್ನು ಕಲಿಯುತ್ತಿರುವ ಸ್ನೇಹ ಚಿತ್ರಕಲೆಯಲ್ಲಿ ಲೋಯರ್ ಗ್ರೇಡ್ ಹಾಗೂ ಹೈಯರ್ ಗ್ರೇಡ್ ಪರೀಕ್ಷೆ ಯಲ್ಲಿ ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ಇವರಿಗೆ ಚಿತ್ರಕಲೆ ವಿಭಾಗದಲ್ಲಿ ಈ ವರುಷದ ಬಾಲ ಗೌರವ ಪ್ರಶಸ್ತಿ ಲಭಿಸಿದೆ.
ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರ ಹಾಗೂ ರಾಜ್ಯ ಹಾಗೂ ಜಿಲ್ಲಾ ಹಾಗೂ ನಗರದಲ್ಲಿ ನಡೆಯುವ ಹಲವಾರು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಶಿಕಾರಿಪುರ: 30ಲೀಟರ್
Designed, Developed and Maintained by PRABHAT SERVICES ™  , AJEYA KANNADA DAILY 2019 ©