Thursday 22 April 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಮಹಿಳೆ ವಿಶಿಷ್ಟ ಶಕ್ತಿಗಳ ಸಂಗಮ: ಅ.ಪ. ರಾಮಭಟ್ಟ

ಪ್ರಕೃತಿಗೂ ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಅವಳು ಮೇರು ಪರ್ವತವಾಗಿ ಬೆಳೆದು ಎಲ್ಲರನ್ನೂ ಬೆಳಸುತ್ತಾಳೆ. ಅಧ್ಯಾತ್ಮಿಕವಾಗಿ ಆರೋಗ್ಯಕರ ಮನೋಭಾವವನ್ನು ಹೊಂದಲು ಸ್ತ್ರೀಶಕ್ತಿಯ ಸಹಕಾರ ಅವಶ್ಯಕವಾಗಿದೆ ಎಂದರು.

2021-03-03 05:30:00,

Ajeya Image
ಶಿವಮೊಗ್ಗ, ಮಾರ್ಚ್ 3:

ಭಜನೆಯಿಂದ ಭಗವಂತನೆಡಗೆ ಎಂಬ ಉದ್ದೇಶದಿಂದ ಪ್ರಾರಂಭಿಸಿ ಮುನ್ನಡೆಯುತ್ತಿರುವ ಶಿವಮೊಗ್ಗ ನಗರದ ಕನಕ ಮಹಿಳಾ ಭಜನಾ ಮಂಡಳಿಯ 5ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಕನಕ ಭಜನಾಮೃತ ಆಯ್ದ ನಾಮ ಸಂಕೀರ್ತನೆಗಳ ಸಂಗ್ರಹ ಪುಸ್ತಕ ಬಿಡುಗಡೆ ಮೂಲಕ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಿತ್ತು.

ಆಯೋಜಿಸಿದ್ದ ಈ ಸಮಾರಂಭದಲ್ಲಿ ಕನಕದಾಸರ ಕೀರ್ತನೆಗಳ ಗೀತಗಾಯನ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು.

ಮಂಡಳಿ ಅಧ್ಯಕ್ಷೆ ಗೀತಾ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಅ.ಪ. ರಾಮಭಟ್ಟ  ಕಾರ್ಯಕ್ರಮ ಉದ್ಘಾಟಿಸಿ ಭಜನಾ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ಸ್ತ್ರೀ ವಿಶಿಷ್ಟ ಶಕ್ತಿಗಳ ಸಂಗಮ. ಅವಳು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಕೃತಿಗೂ ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಅವಳು ಮೇರು ಪರ್ವತವಾಗಿ ಬೆಳೆದು ಎಲ್ಲರನ್ನೂ ಬೆಳಸುತ್ತಾಳೆ. ಅಧ್ಯಾತ್ಮಿಕವಾಗಿ ಆರೋಗ್ಯಕರ ಮನೋಭಾವವನ್ನು ಹೊಂದಲು ಸ್ತ್ರೀಶಕ್ತಿಯ ಸಹಕಾರ ಅವಶ್ಯಕವಾಗಿದೆ ಎಂದರು.

ದಾವಣಗೆರೆ ಶ್ವಾಸಕೋಶ ತಜ್ಞ ಡಾ. ಅಜಿತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಜನಾ ಪರಂಪರೆಯ ಮಹತ್ವ, ವೈಜ್ಞಾನಿಕವಾಗಿ ಅದನ್ನು ಮಾಡುವುದರಿಂದ ಆಗುವ ಲಾಭದಾಯಕವಾಗಲಿದೆ. ಕನಕ ಮಹಿಳಾ ಭಜನಾ ಮಂಡಳಿ ಆರಂಭಿಕ ದಿನಗಳಿಂದ ಸಹಕರಿಸಿದ ಮಹನೀಯರನ್ನು ಅವರು ಸನ್ಮಾನಿಸಿದರು.

 ವಿಶೇಷವಾಗಿ ಸುಮಿತ್ರಾ ಚಿದಂಬರ್, ಭಾರತೀ,  ನಾಗರತ್ನಾ,  ಸುಧಾ ಮಂಜುನಾಥ್ ಹಾಗೂ  ನಾಗರಾಜ್ ಸನ್ಮಾನವನ್ನು ಸ್ವೀಕರಿಸಿದ ಸಾಧಕರಾಗಿದ್ದಾರೆ.

ಕನಕದಾಸರ ಕೀರ್ತನೆಗಳ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ನಗದು ಬಹುಮಾನವನ್ನು ಭಜನಾ ಪರಿಷತ್ ಕಾರ್ಯದರ್ಶಿ  ಶಬರೀಶ್ ಕಣ್ಣನ್ ಹಾಗೂ ಡಾ. ಅಜಿತ್ ಅವರು ವಿತರಿಸಿ ಗೌರವಿಸಿದರು.

ಗೀತಾ ನಾಗರಾಜ್ ಹಾಗೂ ತಂಡದವರು ಇಡೀ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಪದಗಂಟು :       
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©