Tuesday 28 September 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಮನವಿ

2021-04-15 05:30:00, ajeyanews.com

Ajeya Image
ದಾವಣಗೆರೆ, ಏ.15:
ಕರ್ನಾಟಕ ಏಕತಾ ವೇದಿಕೆಯ ವತಿಯಿಂದ ರಾಜ್ಯ ಪ್ರಧಾನ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ರವರ 130ನೇ ಜಯಂತಿಯನ್ನು ಆಚರಿಸಲಾಯಿತು. 

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎನ್.ಹೆಚ್. ಹಾಲೇಶ್ ಅಂಬೇಡ್ಕರ್ ಜೀವನದ ಬಗ್ಗೆ ವಿವರವಾಗಿ ತಿಳಿಸಿದರು. ಅಂಬೇಡ್ಕರ್ ವೃತ್ತದಲ್ಲಿರುವ ಬಾಬಾಸಾಹೇಬರ ಪ್ರತಿಮೆಯನ್ನು ಬದಲಾಯಿಸಿ ಒಂದು ಸುಂದರವಾದ 20 ಅಡಿಯ ಮೂರ್ತಿಯನ್ನು ಸ್ಥಾಪಿಸಬೇಕೆಂದು ಜಿಲ್ಲಾಡಳಿತಕ್ಕೆ ಮಾಧ್ಯಮಗಳ ಮೂಲಕ ಮನವಿ ಮಾಡಿದರು.

ಆವರಗೆರೆ ಮಲ್ಲಿಕಾರ್ಜುನ, ಮಂಜುನಾಯ್ಕ ಬಸಾಪುರ, ಆರ್. ದೇವೇಂದ್ರಪ್ಪ, ಗೋಶಾಲೆ ಸುರೇಶ್, ಪಿ.ಬಿ. ಅಂಜುಕುಮಾರ್, ಟಿ. ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪದಗಂಟು :       
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©