Friday 14 May 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಮಹಾವೀರ ಜಯಂತಿ ಪ್ರಯುಕ್ತ ಜೈನ ಸಮಾಜದಿಂದ ರಕ್ತದಾನ ಶಿಬಿರ

ಸಮಾಜದ ವತಿಯಿಂದ 12 ವರ್ಷದಿಂದ ನಿರಂತರವಾಗಿ ಪ್ರತಿವಷ ಮಹಾವೀರ ಜಯಂತಿ ಪ್ರಯುಕ್ತ ರಕ್ತದಾನ ಮಾಡುತ್ತಾ ಬಂದಿದ್ದೇವೆ. ಆರಂಭದಲ್ಲಿ 16ಜನ ದಾನಿಗಳಿಂದ ಆರಂಭವಾಗಿ ಈಗ ೮೦ರಿಂದ 90 ಜನ ರಕ್ತದಾನಿಗಳು ದಾನ ಮಾಡುತ್ತಿರುವುದು ತುಂಬಾ ವಿಶೇಷವಾಗಿದೆ.

2021-04-27 05:30:00, ajeyanews.com

Ajeya Image
ಶಿವಮೊಗ್ಗ, ಏ.27:

ಜಗತ್ತಿಗೆ ಶಾಂತಿ ಮಂತ್ರವನ್ನು ಹಾಗೂ ಪ್ರತಿಯೊಬ್ಬರಿಗೂ ಅಹಿಂಸಾ ಮಾರ್ಗವನ್ನು ಬೋಧನೆ ಮಾಡಿ ಎಲ್ಲರನ್ನೂ ಸಮನಾಗಿ ಕಾಣಬೇಕು. ಯಾರನ್ನೂ ತಿರಸ್ಕಾರ ಭಾವನೆಯಿಂದ ನೋಡಬಾರದೆಂದು ಜಗತ್ತಿಗೆ ಸಂದೇಶ ಸಾರಿದವರು ಭಗವಾನ್ ಮಹಾವೀರರು ಎಂದು ಸಮಾಜದ ಅಧ್ಯಕ್ಷ ಹಂಸರಾಜ್ ಕಾವಲ್ ಹೇಳಿದರು.

ಮಹಾವೀರ ಜಯಂತಿ ಪ್ರಯುಕ್ತ ಶಿವಮೊಗ್ಗ ನಗರದ ಜೆಪಿಎನ್ ರಸ್ತೆಯಲ್ಲಿರುವ ಸಂಜೀವಿನಿ ರೆಡ್‌ಕ್ರಾಸ್  ಬ್ಲಡ್‌ಬ್ಯಾಂಕಿನಲ್ಲಿ ವರ್ಧಮಾನ್ ಸ್ಥಾನಕವಾಸಿ ಜೈನ್ ಶ್ರವಕ ಸಂಘದ ವತಿಯಿಂದ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಸಮಾಜದ ವತಿಯಿಂದ 12 ವರ್ಷದಿಂದ ನಿರಂತರವಾಗಿ ಪ್ರತಿವಷ ಮಹಾವೀರ ಜಯಂತಿ ಪ್ರಯುಕ್ತ ರಕ್ತದಾನ ಮಾಡುತ್ತಾ ಬಂದಿದ್ದೇವೆ. ಆರಂಭದಲ್ಲಿ 16ಜನ ದಾನಿಗಳಿಂದ ಆರಂಭವಾಗಿ ಈಗ ೮೦ರಿಂದ 90 ಜನ ರಕ್ತದಾನಿಗಳು ದಾನ ಮಾಡುತ್ತಿರುವುದು ತುಂಬಾ ವಿಶೇಷವಾಗಿದೆ. ಕೋವಿಡ್ ಸಂದರ್ಭದಲ್ಲಿ ರಕ್ತದಾನ ಅವಶ್ಯಕತೆ. ತುಂಬಾ ಇರುವುದರಿಂದ ನಾವು ದಾನ ಮಾಡುವುದರ ಜೊತೆಗೆ ಇತರರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು.

ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘದ ಮಾಜಿ ಅಧ್ಯಕ್ಷ ಜಿ. ವಿಜಯಕುಮಾರ್ ಮಾತನಾಡಿ, ರಕ್ತದಾನ ಶ್ರೇಷ್ಠ ದಾನ. ರಕ್ತದಾನ ಮಾಡುವುದರಿಂದ ಹೃದಯಾಘಾತ ಕಡಿಮೆಯಾಗುವುದರ ಜೊತೆಗೆ ಸದಾ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ನಮ್ಮ ದೇಹದಲ್ಲಿ ಕಬ್ಬಿಣ ಅಂಶ ಕಡಿಮೆಯಾಗುತ್ತದೆ.ಉತ್ತಮ ಆರೋಗ್ಯ ಗಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಮಹಿಳೆಯರು ಸೇರಿದಂತೆ 73 ಜನ ರಕ್ತದಾನ ಮಾಡಿ ಪವಿತ್ರಕಾರ್ಯಕ್ರಮದಲ್ಲಿ ಭಾಗಿಯಾದರು.

ಕಾರ್ಯದರ್ಶಿ ರಾಜೇಂದ್ರ ಬುರ, ಮನೋಜ್ ನಹರ್, ಸೋನು ರಾಜ್, ಶ್ರೀಮಲ್, ಪಿಯೋಶ ಬಳಯ, ಸುನಿಲ್ ಪಲೇಚ, ಹಿತೇಶ್ ಬೂರ, ಗೌತಮ್ ಲುಣವತ್, ಸ್ವಾತಿ, ಧರಣೇಂದ್ರ ದಿನಕರ್, ಮಂಜುನಾಥ ಹಾಗೂ ಸಮಾಜದವರು ಉಪಸ್ಥಿತರಿದ್ದರು.

ಪದಗಂಟು :         
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©