Friday 14 May 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಲಿಲಿಪುಟ್ ಸುದ್ದಿ

ಕೋವಿಡ್ ಮಾರ್ಗಸೂಚಿ ಕನ್ನಡದಲ್ಲಿರಲಿ: ಮನವಿ

2021-04-27 05:30:00, ajeyanews.com

Ajeya Image
ಶಿವಮೊಗ್ಗ, ಏ.27:

ಸರ್ಕಾರವು ಇತ್ತೀಚಿನ ಕೊರೋನಾ  ಮಾರ್ಗಸೂಚಿಗಳನ್ನು ಆಂಗ್ಲ ಭಾಷೆಯಲ್ಲಿ ಹೊರಡಿಸುತ್ತಿದೆ. ಮಾರ್ಗಸೂಚಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾರ್ಗಸೂಚಿಯು ಹರಿದಾಡುವುದು. ಆದರೆ ಮಾರ್ಗ ಸೂಚಿಯು  ಆಂಗ್ಲಭಾಷೆಯಲ್ಲಿರುವ ಕಾರಣ ಸಾಕಷ್ಟು ಗೊಂದಲಗಳು ಆಗುವುದರೊಂದಿಗೆ ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಸರ್ಕಾರ  ಹೊರಡಿಸುವ  ಕರ್ಫ್ಯೂ ಮಾರ್ಗಸೂಚಿಗಳನ್ನು ಕರ್ನಾಟಕದ ಆಡಳಿತ ಭಾಷೆಯಾದ ಕನ್ನಡದಲ್ಲಿ ಹಾಗೂ ಜನಸಾಮಾನ್ಯರಿಗೆ ಅರ್ಥವಾಗುವ ಕನ್ನಡ ಭಾಷೆಯಲ್ಲಿ ಹೊರಡಿಸಿದರೆ ಜನಸಾಮಾನ್ಯರು ಮಾರ್ಗಸೂಚಿಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಅನುಸರಿಸಲು ಅನುಕೂಲವಾಗುವುದು ಎಂದು ರಾಜ್ಯ ನಾಗರಿಕರ ರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ. ಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ಶಿವಮೊಗ್ಗ ವಿನೋದ್ ಮತ್ತು ಸದಸ್ಯ ಶ್ರೇಯಸ್ ಉಪಸ್ಥಿತರಿದ್ದರು.

ಪದಗಂಟು :         
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©