Friday 14 May 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಭೀಮ್ ಸುದ್ದಿ

ಕನಿಷ್ಟ 600ಕ್ಕೂ ಹೆಚ್ಚು ವೆಂಟಿಲೇಟರ್ ತಕ್ಷಣ ಒದಗಿಸಿ: ಸುಂದರೇಶ್

ಫೋನ್ ಮಾಡಿ ಸಹಾಯ ಕೇಳಿದವರಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ತಮ್ಮೆಲ್ಲ ಸಮಸ್ಯೆಗಳನ್ನು (ಮೊ: 7760604073, 7760603071)ಕ್ಕೆ ಕರೆಮಾಡಿ ತಿಳಿಸಿ.

2021-05-03 05:30:00, ajeyanews.com

Ajeya Imageಶಿವಮೊಗ್ಗ, ಮೇ 3:
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಟ 600ಕ್ಕೂ ಹೆಚ್ಚು ವೆಂಟಿಲೇಟರ್‌ಗಳನ್ನು ತಕ್ಷಣವೇ ಒದಗಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸರ್ಕಾರಕ್ಕೆ ಆಗ್ರಹಿಸಿದರು. 

ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಸಹಾಯವಾಣಿ ಕೊಠಡಿ ಕಚೇರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ಜಿಲ್ಲೆಯಲ್ಲಿ 2ನೇ ಹಂತದ ಕೊರೋನಾ ಏರುಗತಿಯಲ್ಲಿ ಸಾಗಿದೆ. ನಿಯಂತ್ರಿಸದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ಯಾವ ಆಸ್ಪತ್ರೆಗಳಲ್ಲೂ ಸೌಲಭ್ಯಗಳ ಕೊರತೆಯಿದೆ. ಬಹಳ ಮುಖ್ಯವಾಗಿ ವೆಂಟಿಲೇಟರ್ ಕೊರತೆಯಿದೆ. ಈಗಿರುವ ಅಂಕಿಅಂಶದ ಪ್ರಕಾರ ಕೇವಲ 30ರಿಂದ 40ವೆಂಟಿಲೇಟರ್‌ಗಳು ಇರಬಹುದಷ್ಟೆ. ಈ ಕಾರಣದಿಂದಲೆ ರೋಗಿಗಳು ಹೆಚ್ಚು ಮೃತಪಡುತ್ತಿದ್ದಾರೆ. ನಿನ್ನೆ ಒಂದೇ ದಿನ 12 ಜನ ಮೃತಪಟ್ಟಿರುವುದಕ್ಕೆ ಇದು ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಕನಿಷ್ಟ ಪಕ್ಷ 600 ವೆಂಟಿಲೇಟರ್‌ಗಳನ್ನಾದರೂ ಅಳವಡಿಸಬೇಕಾದ ಅವಶ್ಯಕತೆ ತುರ್ತಿದೆ. ತವರು ಜಿಲ್ಲೆಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಾಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್. ಈಶ್ವರಪ್ಪ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವೆಂಟಿಲೇಟರ್ ಸಿಗದೆ ಮೃತಪಟ್ಟ ಎಲ್ಲರ ಸಾವಿಗೂ ಇವರೇ ಹೊಣೆಗಾರರಾಗುತ್ತಾರೆ ಎಂದರು. 

ಇದಲ್ಲದೆ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಹಾಸಿಗೆಯಿಲ್ಲ, ಆಮ್ಲಜನಕವಿಲ್ಲ, ರೆಮ್‌ಡಿಸಿವಿರ್ ಚುಚ್ಚುಮದ್ದು ಇಲ್ಲ, ಔಷಧಗಳ ಕೊರತೆಯಿದೆ. ಜೊತೆಗೆ ಸಿಬ್ಬಂದಿಗಳ ಕೊರತೆಯೂಯಿದೆ. ಕಳೆದೆರೆಡು ದಿನಗಳಿಂದ ಕೋವಿಡ್ ಲಸಿಕೆಯೂ ಸಿಗುತ್ತಿಲ್ಲ. ಇದರ ಜೊತೆಗೆ ಲಾಕ್‌ ಡೌನ್ ಬೇರೆ. ಹೀಗಾಗಿ ಜಿಲ್ಲಾಡಳಿತ ಸೇರಿದಂತೆ ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಮತ್ತು ಸಾವು ನೋವು ಹೆಚ್ಚಾಗಿದೆ ಎಂದರು. 

ಕಾಂಗ್ರೆಸ್ ಕಚೇರಿಯಲ್ಲಿ ಇಂದಿನಿಂದ ಆರಂಭವಾಗಿರುವ ಕೋವಿಡ್ ನಿಯಂತ್ರಣ ಸಹಾಯವಾಣಿ ಕೇಂದ್ರದಿಂದ ಹಲವು ಸೌಲಭ್ಯಗಳು ದೊರಕಲಿವೆ. ಕೊರೋನಾ ಸೋಂಕಿತರಿಗೆ ಅನುಕೂಲವಾಗಲೆಂದು ಈ ಹೆಲ್ಪ್‌ಲೈನ್ ಸ್ಥಾಪಿಸಲಾಗಿದೆ. ಇಲ್ಲಿ ಕಾರ್ಯಕರ್ತರ ಪಡೆ ಇರುತ್ತದೆ. ಆಸ್ಪತ್ರೆಗೆ ವಾಹನ, ಮಾಸ್ಕ್ ವಿತರಣೆ, ಸ್ಯಾನಿಟೈಸರ್ ಇಲ್ಲಿ ನೀಡಲಾಗುವುದು. ಫೋನ್ ಮಾಡಿ ಸಹಾಯ ಕೇಳಿದವರಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ತಮ್ಮೆಲ್ಲ ಸಮಸ್ಯೆಗಳನ್ನು (ಮೊ: 7760604073, 7760603071)ಕ್ಕೆ  ಕರೆಮಾಡಿ ತಿಳಿಸಿ. 

- ಸುಂದರೇಶ್

ಸರ್ಕಾರ ವಿಳಂಬ ಮಾಡದೆ ನಗರದಲ್ಲಿರುವ ಸುಸಜ್ಜಿತ ಕಲ್ಯಾಣ ಮಂದಿರಗಳು, ಹೋಟೆಲ್‌ಗಳನ್ನು ಈಗಲೇ ವಶಕ್ಕೆ ಪಡೆದು ಅಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗುವಂತೆ ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಬದಲಾಯಿಸಲು ಕ್ರಮತೆಗೆದುಕೊಳ್ಳಬೇಕು. ಜೊತೆಗೆ ಕಳೆದ ಬಾರಿ ಆಶಾ ಕಾರ್ಯಕರ್ತರು ಸೇರಿದಂತೆ ಅನೇಕರಿಗೆ ತರಬೇತಿ ನೀಡಲಾಗಿತ್ತು. ಇವರನ್ನು ಮತ್ತೆ ಕೋವಿಡ್ ವಾರಿಯರ್ಸ್‌ರನ್ನಾಗಿ ನೇಮಕ ಮಾಡಿಕೊಳ್ಳಬೇಕು. ತಕ್ಷಣವೇ ಲಸಿಕೆಗಳನ್ನು ಪೂರೈಸಬೇಕು. ಆಮ್ಲಜನಕ ಅಗತ್ಯತೆಯನ್ನು ಈಗಿನಿಂದಲೇ ಸರಿಪಡಿಸಬೇಕು ಎಂದು ಆಗ್ರಹಿಸಿದ ಅವರು, ಲಾಕ್‌ಡೌನ್‌ನ್ನು 10 ಗಂಟೆಗೆ ಸೀಮಿತಗೊಳಿಸಿರುವುದರಿಂದ ಜನರ ಒತ್ತಡ ಹೆಚ್ಚಾಗುತ್ತಿದೆ. ಅದನ್ನು ಸ್ಪಲ್ವ ವಿಸ್ತರಿಸಿದರೆ ಜನರು ಒಮ್ಮೆಗೆ ಅಗತ್ಯ ವಸ್ತುಗಳ ಖರೀದಿಸಲು ಬರಲಾರರು ಎಂದು ಅಭಿಪ್ರಾಯಿಸಿದರು.

ಚುನಾವಣಾ ಫಲಿತಾಂಶಕ್ಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಂಚರಾಜ್ಯದ ಚುನಾವಣೆಯಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಇದು ಬಿಜೆಪಿಯ ಅವಸಾನದ ದಾರಿಯಾಗಿದೆ. ಕರ್ನಾಟಕದಲ್ಲಿ ಮಸ್ಕಿಯಲ್ಲಿ ನಾವು ಗೆದ್ದಿದ್ದೇವೆ. ಜನ ತಕ್ಕಪಾಠ ಕಲಿಸಿದ್ದಾರೆ. ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ ಸೋತಿದೆ ನಿಜ. ಆದರೆ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿ ಕಡಿಮೆ ಅಂತರದಲ್ಲಿ ಸೋತಿದೆ. ಒಟ್ಟಾರೆ ಈ ಚುನಾವಣೆಯಿಂದ ಬಿಜೆಪಿಯಂತು ಪಾಠ ಕಲಿಯಬೇಕಾಗಿದೆ ಎಂದರು. 

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಮುಖಂಡರಾದ ಡಾ. ಶ್ರೀನಿವಾಸ್ ಕರಿಯಣ್ಣ, ವಿಶ್ವನಾಥ್ ಕಾಶಿ, ಎಲ್.ರಾಮೇಗೌಡ, ನಾಗರಾಜ್, ಯಮುನಾ ರಂಗೇಗೌಡ, ಚಂದ್ರಭೂಪಾಲ್, ದೇವೇಂದ್ರಪ್ಪ, ಸುವರ್ಣ ನಾಗರಾಜ್, ಸೌಗಂಧಿಕ, ಸೆಲ್ವಮಾರ್ಟಿನ್, ಎನ್.ಡಿ. ಪ್ರವೀಣ್ ಸೇರಿದಂತೆ ಹಲವರಿದ್ದರು. 


ಪದಗಂಟು :           
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©