Sunday 25 July 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಸೂಕ್ತ ಚಿಕಿತ್ಸೆಯಿಂದ ಕೋವಿಡ್ ದೂರ: ಡಾ. ಶ್ರೀನಿವಾಸ್ ಕರಿಯಣ್ಣ

ಹಲವರಿಗೆ ರೋಗ ನಿರೋಧಕ ಶಕ್ತಿ ಇರುತ್ತದೆ ಮತ್ತು ಕೆಲವರಿಗೆ ಇರುವುದಿಲ್ಲ. ಹಾಗೆಯೇ ಕೊರೋನಾ ಲಕ್ಷಣಗಳಿಲ್ಲದವರೂ ಕೂಡ ಸೋಂಕಿತರಾಗುತ್ತಿರುವುದು ಕಂಡುಬರುತ್ತಿದೆ.

2021-05-03 05:30:00, ajeyanews.com

Ajeya Imageಶಿವಮೊಗ್ಗ,ಮೇ 3:
ಕೊರೋನಾ ಬಂದರೆ ಯಾರೂ ಭಯಪಡಬೇಡಿ. ಸರಿಯಾದ ಚಿಕಿತ್ಸೆ ಪಡೆದರೆ ಕೊರೋನಾದಿಂದ ಮುಕ್ತರಾಗಲು ಸಾಧ್ಯ ಎಂದು ಕಾಂಗ್ರೆಸ್ ಮುಖಂಡ ಹಾಗೂ ವೈದ್ಯ ಡಾ. ಶ್ರೀನಿವಾಸ್ ಕರಿಯಣ್ಣ ಹೇಳಿದರು. 

ಅವರು ಇಂದು ದೈವಜ್ಞ ಕಲ್ಯಾಣ ಮಂದಿರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಐಸೋಲೇಷನ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. 

ಜ್ವರ, ಗಂಟಲು ಕೆರೆತ, ಶೀತ ಮುಂತಾದ ಶಿವಮೊಗ್ಗ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟ ಲಕ್ಷಣ ರಹಿತ ಸೋಂಕಿತರು ಯಾವ ಭಯಪಡಬೇಕಾದ ಅವಶ್ಯಕತೆಯಿಲ್ಲ. ಅದರ ಲಕ್ಷಣ ಇರುವವರು ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಂಡರೆ ಯಾವ ಅಪಾಯವೂ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ ಈ ಕಿಟ್‌ನ್ನು ವಿತರಿಸಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬೇಕು. ಹಲವರಿಗೆ ರೋಗ ನಿರೋಧಕ ಶಕ್ತಿ ಇರುತ್ತದೆ ಮತ್ತು ಕೆಲವರಿಗೆ ಇರುವುದಿಲ್ಲ. ಹಾಗೆಯೇ ಕೊರೋನಾ ಲಕ್ಷಣಗಳಿಲ್ಲದವರೂ ಕೂಡ ಸೋಂಕಿತರಾಗುತ್ತಿರುವುದು ಕಂಡುಬರುತ್ತಿದೆ. ಇವರಿಗೆ ಬಹಳಷ್ಟು ತೊಂದರೆ ಆಗಲಾರದು. ಇವರು ಮನೆಯಲ್ಲಿಯೇ ಔಷಧಿಗಳನ್ನು ತೆಗೆದುಕೊಂಡರೆ ಬೇಗ ಗುಣಮುಖರಾಗುವ ಸಾಧ್ಯತೆ ಹೆಚ್ಚಿದೆ ಎಂದರು.

ಸಾಮಾನ್ಯ ಲಕ್ಷಣಗಳು ಕಂಡುಬಂದ ತಕ್ಷಣ ಈ ಕಿಟ್‌ನಲ್ಲಿರುವ ಕ್ಯಾಲ್ಸಿಯಂ, ಸಿಟ್ರಿಜನ್, ಮುಂತಾದ ಮಾತ್ರೆಗಳನ್ನು ತೆಗೆದುಕೊಂಡು ಜೊತೆಗೆ ಬಿಸಿ ನೀರು, ಬಿಸಿ ಊಟ, ಆಗಾಗ ಹಬೆ ತೆಗೆದುಕೊಳ್ಳುವುದರಿಂದ ಕಾಯಿಲೆಯನ್ನು ಬೇಗ ಗುಣಪಡಿಸಿಕೊಳ್ಳಬಹುದು. ಜೊತೆಗೆ ವಾಕ್ ಕೂಡ ಮಾಡಬೇಕು. ಉಸಿರಾಟಕ್ಕೆ ಸ್ವಲ್ಪ ತೊಂದರೆಯಾದರೆ ಮಕಾಡೆ ಮಲಗಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಪ್ರವೀಣ್ ಕುಮಾರ್, ಕೆ.ರಂಗನಾಥ್, ಗಿರೀಶ್, ಕಿರಣ್ ಸೇರಿದಂತೆ ಹಲವರಿದ್ದರು.  


ಪದಗಂಟು :       
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©