Sunday 25 July 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ದುಬಾರಿ ಬೆಲೆಗೆ ತರಕಾರಿ ಮಾರಾಟ ಮಾಡಿದರೆ ಕ್ರಮ

ಲಾಕ್ ಡೌನ್ ಸಮಯದಲ್ಲಿ ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆಗಳಲ್ಲಿ ಮಾರಾಟ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆಯ 6 ಗಂಟೆಯವರೆಗೆ ತಳ್ಳುವ ಗಾಡಿ ಮೂಲಕ ಮನೆ ಬಾಗಿಲಿಗೆ ಬರಲಿದೆ .

2021-05-03 05:30:00, ajeyanews.com

Ajeya Imageದಾವಣಗೆರೆ, ಮೇ 3:
ಜಗಳೂರು ಪಟ್ಟಣದ ಸರ್ಕಾರಿ ಹಿರಿಯ ಬಾಲಕಿಯರ ಶಾಲೆ ಆವರಣದಲ್ಲಿ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟ ನಿರ್ಬಂಧ ಮಾಡಲಾಗಿದೆ ಎಂದು ಪಿಎಸ್‌ಐ ಸಂತೋಷ ಬಾಗೊಜಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಆದೇಶದ ಮೇರೆಗೆ ಇಂದಿನಿಂದ ಲಾಕ್ ಡೌನ್ ಸಮಯದಲ್ಲಿ ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆಗಳಲ್ಲಿ ಮಾರಾಟ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆಯ 6 ಗಂಟೆಯವರೆಗೆ ತಳ್ಳುವ ಗಾಡಿ ಮೂಲಕ ಮನೆ ಬಾಗಿಲಿಗೆ ಬರಲಿದೆ . ಇನ್ನೂ ತರಕಾರಿ ಹಣ್ಣು ಮಾರಾಟ ಮಾಡುವಾಗ ದುಬಾರಿ ಬೆಲೆಯ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಓಡಾಟ ಮಾಡುತಿದ್ದ ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ದಂಡ ಹಾಕಲಾಯಿತು ಇದೇ ತರಕಾರಿ ಮಾರುಕಟ್ಟೆ , ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸದೆ ಓಡಾಟ ಮಾಡುವ ಸಾರ್ವಜನಿಕರಿಗೆ 100 ರೂ ದಂಡ ಹಾಕಲಾಗುತ್ತದೆ.ಪಟ್ಟಣ ಪಂಚಾಯತಿ ಅಧಿಕಾರಿಗಳು ನಮ್ಮ ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಂಗ್ರಹ ಮಾಡುತ್ತಿದ್ದಾರೆ.

 ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ರಾಜು ಡಿ. ಬಣಕರ್ , ಕಂದಾಯ ನಿರೀಕ್ಷ ಸಂತೋಷ , ಆರೋಗ್ಯ ನಿರೀಕ್ಷಕ ಕಿಫಾಯತ್ , ಅಂಬ್ರನ್ ಖಾನಂ ಸಿಬ್ಬಂದಿಗಳಾದ ನೂರುಲ್ಲಾ ಶರೀಫ್, ಶ್ರೀನಿವಾಸ, ಪ್ರದೀಪ್ ಸೇರಿದಂತೆ ಮತ್ತಿತರರು ಇದ್ದರು.

ಪದಗಂಟು :     
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©