Friday 14 May 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಎನ್‌ ಎಸ್‌ ಯು ಐನಿಂದ ಊಟ, ನೀರು ವಿತರಣೆ

ಮುಂಜಾನೆ ಬ್ರೆಡ್, ಜ್ಯೂಸ್, ಮಧ್ಯಾಹ್ನ ಊಟ ನೀರಿನ ವ್ಯವಸ್ಥೆ ಮಾಡಲಾಯಿತು. ಕೊರೋನ ವಾರಿರ್ಯಸ್‌ಗಳಿಗೆ ಜ್ಯೂಸ್ ಹಾಗೂ ನೀರನ್ನು ನೀಡಲಾಯಿತು.

2021-05-03 05:30:00, ajeyanews.com

Ajeya Imageಶಿವಮೊಗ್ಗ, ಮೇ 3:
ಕೋವಿಡ್ ಸೋಂಕಿನ ಎರಡನೆಯ ಅಲೆ ಹರಡುವಿಕೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಕರ್ಫ್ಯೂ ಮಾಡಿರುವುದರಿಂದ ಶಿವಮೊಗ್ಗ ನಗರದಲ್ಲಿ ನಿರಾಶ್ರಿತರಿಗೆ ಜಿಲ್ಲಾ ಎನ್‌ ಎಸ್‌ ಯು ಐ ವತಿಯಿಂದ ಸಹಾಯಹಸ್ತ ನೀಡಲಾಯಿತು. 

ಮುಂಜಾನೆ ಬ್ರೆಡ್, ಜ್ಯೂಸ್, ಮಧ್ಯಾಹ್ನ ಊಟ ನೀರಿನ ವ್ಯವಸ್ಥೆ ಮಾಡಲಾಯಿತು. ಕೊರೋನ ವಾರಿರ್ಯಸ್‌ಗಳಿಗೆ ಜ್ಯೂಸ್ ಹಾಗೂ ನೀರನ್ನು ನೀಡಲಾಯಿತು. 

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್ ಕೆ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಬಾಲಾಜಿ ಎಚ್.ಎಸ್, ನಗರ ಅಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿಕುಮಾರ್ ಜಿ, ಶಿವಮೊಗ್ಗ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮಹಮ್ಮದ್ ನಿಹಾಲ್, ಯುವ ಕಾಂಗ್ರೆಸ್ ಉತ್ತರ ಬ್ಲಾಕ್ ಉಪಾಧ್ಯಕ್ಷ ಗಿರೀಶ್ ಆರ್,  ಆಕಾಶ್, ಸಂದೇಶ್, ಅನಘ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರು ಇದ್ದರು.

ಪದಗಂಟು :       
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©