Friday 14 May 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ದಾವಣಗೆರೆ: ಜಿಪಂನ 34 ಸ್ಥಾನಗಳಿಗೆ ಮೀಸಲಾತಿ ಪ್ರಕಟ

ಕೊರೋನಾ ಹಿನ್ನೆಲೆ 6 ತಿಂಗಳು ಯಾವುದೇ ಚುನಾವಣೆ ನಡೆಸದಂತೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಇದೀಗ ಚುನಾವಣೆ ಆಯೋಗ ಮೀಸಲಾತಿ ಪ್ರಕಟಿಸಿದೆ.

2021-05-03 05:30:00, ajeyanews.com

Ajeya Imageದಾವಣಗೆರೆ, ಮೇ 3:
ದಾವಣಗೆರೆ ಜಿಲ್ಲಾ ಪಂಚಾಯ್ತಿಯ 34 ಸ್ಥಾನಗಳಿಗೆ ಮೀಸಲಾತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. 

ಪರಿಶಿಷ್ಟ ಜಾತಿಗೆ 8 (ನಾಲ್ಕು ಸ್ಥಾನ ಮಹಿಳೆಯರಿಗೆ), ಪರಿಶಿಷ್ಟ ಪಂಗಡ- 5 (ಮಹಿಳೆಯರಿಗೆ 3), ಹಿಂದುಳಿದ ವರ್ಗ ಎ-3,ಹಿಂದುಳಿದ ವರ್ಗ ಬಿ-1 ಸಾಮಾನ್ಯ ವರ್ಗ -17 (ಮಹಿಳೆ 8) ಸೇರಿದಂತೆ ಒಟ್ಟು  34 ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದೆ. ಜಿಲ್ಲಾ ಪಂಚಾಯಿಗಳಿಗೆ ಈಗಾಗಲೇ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಿಸಿದೆ.

ಕೊರೋನಾ ಹಿನ್ನೆಲೆ 6 ತಿಂಗಳು ಯಾವುದೇ ಚುನಾವಣೆ ನಡೆಸದಂತೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಇದೀಗ ಚುನಾವಣೆ ಆಯೋಗ ಮೀಸಲಾತಿ ಪ್ರಕಟಿಸಿದೆ. ಆದರೆ, ಚುನಾವಣೆ ಯಾವಾಗ ನಡೆಯುತ್ತದೆ ಎಂಬುದು ಇನ್ನೂ ನಿರ್ಧರವಾಗಿಲ್ಲ.

ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©