Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ತರಕಾರಿ ಸಗಟು ವ್ಯಾಪಾರದ ವೇಳೆ ಬದಲಿಸಿ: ಮನವಿ

ದಿನಸಿ ಮಾರಾಟಕ್ಕೆ ಬೆಳಗ್ಗೆ 6 ರಿಂದ 9ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಹಾಗೆಯೇ ಮದ್ಯ ವ್ಯಾಪಾರಕ್ಕೆ ಕೂಡ ಬೆಳಗ್ಗೆ 9 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಆದರೆ, ತರಕಾರಿಗೆ ಮಾತ್ರ ಕೇವಲ 1 ಗಂಟೆ ಅವಕಾಶ ನೀಡಿರುವುದು ಸರಿಯಲ್ಲ.

2021-05-18 05:30:00, ajeyanews.com

Ajeya Imageಶಿವಮೊಗ್ಗ, ಮೇ 18:
ಎಪಿಎಂಸಿ ತರಕಾರಿ ಸಗಟು ವ್ಯಾಪಾರದ ವೇಳೆಯನ್ನು ಬದಲಾಯಿಸಬೇಕು ಎಂದು ರೈತರು ಮತ್ತು ಸಗಟು ವ್ಯಾಪಾರಸ್ಥರು ಒತ್ತಾಯಿಸಿದರು.

ಜಿಲ್ಲಾಡಳಿತ ವಿಶೇಷ ಲಾಕ್‌ಡೌನ್ ಜಾರಿ ಮಾಡಿರುವುದು ಸರಿಯಷ್ಟೇ. ತರಕಾರಿ ಸಗಟು ವ್ಯಾಪಾರಸ್ಥರು ಕೂಡ ಇದಕ್ಕೆ ತಮ್ಮ ಬೆಂಬಲ ನೀಡಿದ್ದರು. ಆದರೆ, ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ವ್ಯಾಪಾರದ ವೇಳೆಯನ್ನು ಮೊಟಕುಗೊಳಿಸಿವೆ. ಬೆಳಗ್ಗೆ 6 ರಿಂದ 7 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ. ತರಕಾರಿ ವ್ಯಾಪಾರ ಮಾಡುವುದು ಬಹಳ ಕಷ್ಟವಾಗುತ್ತದೆ. ರೈತರು ತಾವು ಬೆಳೆದ ತರಕಾರಿಯನ್ನು ಮಾರಾಟ ಮಾಡದೇ ವಾಪಸ್ ತೆಗೆದುಕೊಂಡು ಹೋಗಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಪಿಎಂಸಿ ಸಗಟು ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎನ್. ರಮೇಶ್ ಮಾತನಾಡಿ, ಬೆಳಗ್ಗೆ 6 ರಿಂದ 7ಗಂಟೆಯವರೆಗೆ  1 ಗಂಟೆ ಮಾತ್ರ ಅವಕಾಶ ನೀಡಿರುವುದು ಅವೈಜ್ಞಾನಿಕವಾಗಿದೆ. ದಿನಸಿ ಮಾರಾಟಕ್ಕೆ ಬೆಳಗ್ಗೆ 6 ರಿಂದ 9ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಹಾಗೆಯೇ ಮದ್ಯ ವ್ಯಾಪಾರಕ್ಕೆ ಕೂಡ ಬೆಳಗ್ಗೆ 9 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಆದರೆ, ತರಕಾರಿಗೆ ಮಾತ್ರ ಕೇವಲ 1 ಗಂಟೆ ಅವಕಾಶ ನೀಡಿರುವುದು ಸರಿಯಲ್ಲ. ಇದರಿಂದ ರೈತರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ದಿನಸಿ ಮತ್ತು ಮದ್ಯ ಒಂದೆರಡು ದಿನ ಇಟ್ಟರೆ ಕೆಡುವುದಿಲ್ಲ. ಆದರೆ ತರಕಾರಿ ಮಾತ್ರ ಒಂದೆರಡು ದಿನದಲ್ಲಿ ಕೊಳೆತು ಹಾಳಾಗಿ ನಷ್ಟವಾಗುತ್ತದೆ. ತರಕಾರಿ ಬೆಳೆದವರಿಗೆ ತುಂಬಾ ಕಷ್ಟವಾಗುತ್ತದೆ. ತರಕಾರಿ ಬೆಲೆ ಏರಿಕೆಗೂ ಇದು ಕಾರಣವಾಗಲಿದೆ. ಅಲ್ಲದೇ ಒಂದೇ ಗಂಟೆ ಸಮಯ ಕೊಟ್ಟಿರುವುದರಿಂದ ಮಾರುಕಟ್ಟೆಯಲ್ಲಿ ನೂಕುನುಗ್ಗಲು ಹೆಚ್ಚಾಗಿ ಮತ್ತಷ್ಟು ಕೋವಿಡ್ ಹರಡಲು ಕಾರಣವಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಈ ಅವೈಜ್ಞಾನಿಕ ನಿರ್ಧಾರ ಕೈಬಿಟ್ಟು ಕನಿಷ್ಟ ಪಕ್ಷ ಬೆಳಗ್ಗೆ 6 ರಿಂದ 9ಗಂಟೆಯವರೆಗೆ ತರಕಾರಿ ಸಗಟು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರಮೇಶ್ ಮನವಿ ಮಾಡಿದ್ದಾರೆ.


ಪದಗಂಟು :         
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©