Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಅನ್ನದಾನ ಮಾನವೀಯತೆಯ ಪ್ರತೀಕ: ಮರುಳಸಿದ್ಧ ಸ್ವಾಮೀಜಿ

ವಿದ್ಯಾನಗರದ ಗೆಳೆಯರ ಬಳಗದ ಈ ಕೆಲಸ ತುಂಬಾ ಅರ್ಥಪೂರ್ಣವಾಗಿದೆ. ಬೇರೆ ದಿನಗಳಲ್ಲಿ ಅನ್ನಸಂತರ್ಪಣೆ ಮಾಡುವುದು ಅಷ್ಟೊಂದು ಕಷ್ಟದ ಕೆಲಸವಲ್ಲ, ಆದರೆ, ಕೋವಿಡ್ ಸಂದರ್ಭದಲ್ಲಿ ಪ್ರತಿದಿನವೂ ದೂರದ ಭಾಗಗಳಿಗೆ ಹೋಗಿ ಹಸಿದವರಿಗೆ ಅನ್ನ ನೀಡುವ ಕೆಲಸ ಕಷ್ಟ

2021-05-19 05:30:00, ajeyanews.com

Ajeya Imageಶಿವಮೊಗ್ಗ, ಮೇ 19:
ಹಸಿದವರಿಗೆ ಅನ್ನದಾನ ಮಾಡುವುದು ಮಾನವೀಯತೆತೆ ಪ್ರತೀಕ ಎಂದು ಬಸವ ಕೇಂದ್ರದ ಶ್ರೀಮರುಳಸಿದ್ಧ ಸ್ವಾಮೀಜಿ ಹೇಳಿದರು. 

ಅವರು ಇಂದು ವಿದ್ಯಾನಗರದ ಚೌಡೇಶ್ವರಿ ಸಮುದಾಯ ಭವನದಲ್ಲಿ ಗೆಳೆಯರ ಬಳಗದಿಂದ ಹಸಿದವರಿಗೆ ಅನ್ನ ನೀಡುವ ಕಾಯಕದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾನಗರದ ಗೆಳೆಯರ ಬಳಗದ ಈ ಕೆಲಸ ತುಂಬಾ ಅರ್ಥಪೂರ್ಣವಾಗಿದೆ. ಬೇರೆ ದಿನಗಳಲ್ಲಿ ಅನ್ನಸಂತರ್ಪಣೆ ಮಾಡುವುದು ಅಷ್ಟೊಂದು ಕಷ್ಟದ ಕೆಲಸವಲ್ಲ, ಆದರೆ, ಕೋವಿಡ್ ಸಂದರ್ಭದಲ್ಲಿ ಪ್ರತಿದಿನವೂ ದೂರದ ಭಾಗಗಳಿಗೆ ಹೋಗಿ ಹಸಿದವರಿಗೆ ಅನ್ನ ನೀಡುವ ಕೆಲಸ ಬಹಳ ಕಷ್ಟದ್ದು. ಇಂತಹ ಕೆಲಸವನ್ನು ಗೆಳೆಯರ ತಂಡ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ. ಇವರ ಸೇವೆ ನಿರಂತರವಾಗಿರಲಿ. ಕೊರೋನಾ ಎಂಬ ಮಹಾಮಾರಿ ಆದಷ್ಟು ಬೇಗ ಈ ಜಗತ್ತಿನಿಂದಲೇ ದೂರವಾಗಲಿ. ಮಾನವೀಯತೆ ಮೆರೆಯಲಿ ಎಂದರು.

ಮೇಯರ್ ಸುನಿತಾ ಅಣ್ಣಪ್ಪ ಮಾತನಾಡಿ, ಪಕ್ಷಬೇಧ ಮರೆತು ಗೆಳೆಯರ ಬಳಗ ಮಾಡುತ್ತಿರುವ ಈ ಸೇವೆ ಮೆಚ್ಚುವಂತಹುದು. ಶ್ರೀಕಾಂತ್, ವಿಶ್ವನಾಥ್ ಕಾಶಿ ಇದರ ನೇತೃತ್ವ ವಹಿಸಿದ್ದಾರೆ. ಕೊರೋನಾದ ಈ ಸಂದರ್ಭದಲ್ಲಿ ಇಂತಹ ಮಾನವೀಯತೆ ಹೃದಯಗಳು ಹಸಿದವರಿಗಾಗಿ ಮತ್ತಷ್ಟು  ಸ್ಪಂದಿಸಬೇಕಾಗಿದೆ ಎಂದರು.

ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್ ಮಾತನಾಡಿ, ಇದೊಂದು ಅರ್ಥಪೂರ್ಣ ಕೆಲಸ. ಪ್ರತಿದಿನ ಸುಮಾರು ೧೫೦೦ ಜನರಿಗೆ ಇಲ್ಲಿ ಊಟ ನೀಡುತ್ತಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷಬೇಧ ಮರೆತು ಶ್ರಮಪಡುತ್ತಿದ್ದಾರೆ. ಮಾನವೀಯತೆಗೆ ಇಲ್ಲಿ ಬೆಲೆ ಇದೆ. ಇಂತಹ ಕೆಲಸಗಳು ಮತ್ತಷ್ಟು ಹೆಚ್ಚಾಗಲಿ. ನಾವು ಕೂಡ ಇವರ ನೆರವಿಗೆ ನಿಲ್ಲುತ್ತೆವೆ ಎಂದರು.

ಉಪಮೇಯರ್ ಶಂಕರ್‌ಗನ್ನಿ, ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಧೀರರಾಜ್ ಹೊನ್ನವಿಲೆ, ಇ.ವಿಶ್ವಾಸ್, ವಿಶ್ವನಾಥ್, ಮಂಜುನಾಥ್, ಗೆಳೆಯರ ಬಳಗದ ಶ್ರೀಕಾಂತ್ ಕಾಮತ್, ವಿಶ್ವಾನಾಥ್ ಕಾಶಿ, ಮಂಡೇನಕೊಪ್ಪ ದೇವರಾಜ್ ಸೇರಿದಂತೆ ಹಲವರಿದ್ದರು.

ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©