Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ವಾಹನ ಜಖಂ ಮಾಡಿದವರ ವಿರುದ್ಧ ಕ್ರಮ

ಗಾಂಜಾ ಮತ್ತಿನಲ್ಲಿ ಅಥವಾ ಕುಡಿದ ಅಮಲಲ್ಲಿ ಇಂತಹ ಕೃತ್ಯವೆಸಗಿರಬಹುದಾದರೂ, ರಾಡ್‌ಗಳಿಂದ ವಾಹನಗಳ ಗಾಜು ಹಾನಿ ಮಾಡಿರುವುದನ್ನು ಗಮನಿಸಿದಾಗ ಇದರ ಹಿಂದೆ ದುರುದ್ಧೇಶವಿದೆ.

2021-05-20 05:30:00, ajeyanews.com

Ajeya Imageಶಿವಮೊಗ್ಗ,ಮೇ 20:
ನಗರದಲ್ಲಿ ವಾಹನಗಳನ್ನು ಜಖಂ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಅವರು ಇಂದು ಸಿದ್ಧಯ್ಯ ರಸ್ತೆ ಮತ್ತು ಎಂಕೆಕೆ ರಸ್ತೆಯಲ್ಲಿ ನಿನ್ನೆ ಕಿಡಿಗೇಡಿಗಳು ವಾಹನಗಳನ್ನು ಧ್ವಂಸ ಮಾಡಿದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಇಲ್ಲಿನ ಕೃತ್ಯಗಳನ್ನು ಗಮನಿಸಿದರೆ ಬೇಕೆಂದೇ ಮಾಡಿದ ಹಾಗಿದೆ. ಗಾಂಜಾ ಮತ್ತಿನಲ್ಲಿ ಅಥವಾ ಕುಡಿದ ಅಮಲಲ್ಲಿ ಇಂತಹ ಕೃತ್ಯವೆಸಗಿರಬಹುದಾದರೂ, ರಾಡ್‌ಗಳಿಂದ ವಾಹನಗಳ ಗಾಜು ಹಾನಿ ಮಾಡಿರುವುದನ್ನು ಗಮನಿಸಿದಾಗ ಇದರ ಹಿಂದೆ ದುರುದ್ಧೇಶವಿದೆ. ಕುಡಿದ ಮತ್ತಿನಲ್ಲಿ ಮಾಡಿದ್ದರೆ ಕೈಗೆ ಸಿಕ್ಕ ಕಲ್ಲಿನಿಂದ ಗಾಜು ಪುಡಿ ಮಾಡುತಿದ್ದರೆನೋ ಆದರೆ, ದುಷ್ಕೃತ್ಯವೆಸಗಿದವರು ರಾಡ್‌ಗಳನ್ನು ಬಳಸಿದ್ದಾರೆ ಎಂದರೆ ಇದು ಬೇಕಂತಲೇ ಮಾಡಿರುವ ಕೆಲಸ ಎಂದು ಸಂಶಯ ವ್ಯಕ್ತಪಡಿಸಿದರು.

ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದೆ. ದುಷ್ಕೃತ್ಯವೆಸಗಿದವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಪ್ರದೇಶದ ಜನ ಮತ್ತೆ ಮತ್ತೆ ಘಟನೆಗಳು ನಡೆಯುತ್ತಿರುವುದರಿಂದ ಭಯಭೀತರಾಗಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ವಾಹನ ಜಖಂಗೊಳಿಸಿದ್ದಾರೆ. ನಾಳೆ ಮನೆಗಳನ್ನು ಹಾನಿ ಮಾಡಿದರೂ ಕೂಡ ಆಶ್ಚರ್ಯವಿಲ್ಲ ಎನ್ನುತ್ತಿದ್ದಾರೆ. 

ಈ ಹಿನ್ನೆಲೆಯಲ್ಲಿ ಇಲ್ಲಿನ ಕೆಲವು ಸೂಕ್ಷ್ಮ ಪ್ರದೇಶಗಳನ್ನು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ವಾಹನಗಳ ಜಖಂನಿಂದ ನಷ್ಟ ಉಂಟಾದವರಿಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಪದಗಂಟು :       
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©