Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಸಹಾಯಹಸ್ತ ನೀಡುವುದು ಮಾನವೀಯತೆ ಗುಣ

ಸರ್ಕಾರ ಈಗಾಗಲೇ ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ನೆರವು ಘೋಷಣೆ ಮಾಡಿದೆ. ಜನ ಎಚ್ಚರಿಕೆಯಿಂದ ಇರಬೇಕು. ಮನೆಯಿಂದ ಹೊರಗೆ ಹೋಗುವುದನ್ನು ಕಡಿಮೆ ಮಾಡಿ ಸುರಕ್ಷಿತವಾಗಿರಿ. ಈಗ ಯುವಕರೂ ಕೂಡ ಹೆಚ್ಚು ಸೋಂಕಿತರಾಗುತ್ತಿದ್ದಾರೆ

2021-05-20 05:30:00, ajeyanews.com

Ajeya Imageಶಿವಮೊಗ್ಗ, ಮೇ 20:
ಕೊರೋನಾದಂತಹ ಸಂದರ್ಭದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಸಹಾಯಹಸ್ತ ನೀಡುವುದು ಮಾನವೀಯತೆ ಗುಣ ಎಂದು ಸಾಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಇಂದು ದೈವಜ್ಞ ಕಲ್ಯಾಣ ಮಂದಿರದಲ್ಲಿ ಸಂಸ್ಕೃತಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಬಡವರಿಗೆ ಕಿಟ್ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾವು, ನೋವುಗಳು ಉಂಟಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಿಸಲು ಹಗಲು, ರಾತ್ರಿ ಶ್ರಮಿಸುತ್ತಿವೆ. ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಕೋವಿಡ್ ನಿಯಂತ್ರಣಕ್ಕಾಗಿ ಓಡಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಸಂಸ್ಕೃತಿ ಫೌಂಡೇಷನ್ ಬಡವರಿಗೆ ಆಹಾರದ ಕಿಟ್‌ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಸಂಘ, ಸಂಸ್ಥೆಗಳು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ ವಿಷಯವಾಗಿದೆ. ಇಂತಹ ಸಂಸ್ಥೆಗಳು ಮತ್ತಷ್ಟು ಹೆಚ್ಚಾಗಲಿ. ಅವರಿಗೆ ಅಭಿನಂದನೆಗಳು ಎಂದರು.

ಸರ್ಕಾರ ಈಗಾಗಲೇ ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ನೆರವು ಘೋಷಣೆ ಮಾಡಿದೆ. ಜನ ಎಚ್ಚರಿಕೆಯಿಂದ ಇರಬೇಕು. ಮನೆಯಿಂದ ಹೊರಗೆ ಹೋಗುವುದನ್ನು ಕಡಿಮೆ ಮಾಡಿ ಸುರಕ್ಷಿತವಾಗಿರಿ. ಈಗ ಯುವಕರೂ ಕೂಡ ಹೆಚ್ಚು ಸೋಂಕಿತರಾಗುತ್ತಿದ್ದಾರೆ ಎಂದರು. 

ಸಂಸ್ಕೃತಿ ಫೌಂಡೇಷನ್‌ನ ಸದಸ್ಯ ಪ್ರವೀಣ್ ಮಾತನಾಡಿ, ಇಂದು ೨೦೦ ಕುಟುಂಬಗಳಿಗೆ ಆಹಾರದ ಕಿಟ್ ನೀಡಲಾಗುತ್ತಿದೆ. ಕೊರೋನಾದ ಸಂದರ್ಭದಲ್ಲಿ ಅತ್ಯಂತ ಕಷ್ಟದಲ್ಲಿರುವವರನ್ನು ಫೌಂಡೇಷನ್ ಗುರುತಿಸಿದೆ. ಅವರಿಗೆ ಕಿಟ್ ನೀಡಲಾಗುವುದು. ಇದರ ಹಿಂದೆ ಇತರೆ ಸಂಸ್ಥೆಗಳು ಕೂಡ ಸಹಾಯ ಮಾಡಿವೆ ಎಂದರು,

ಅಧ್ಯಕ್ಷ ರೋಹಿತ್, ಕಿರಣ್, ಪ್ರದೀಪ್, ಉಮೇಶ್, ಪ್ರಜ್ವಲ್ ಸೇರಿದಂತೆ ಹಲವರಿದ್ದರು.

ಪದಗಂಟು :       
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©