Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಕರಿಯಣ್ಣ ನೆನಪಿನಲ್ಲಿ ಉಚಿತ ಅಂಬ್ಯುಲೆನ್ಸ್

ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಒಳ್ಳೆಯ ಊಟ, ಆದಷ್ಟು ಮನೆಯಲ್ಲಿಯೇ ಇರುವುದನ್ನು ಪಾಲಿಸಿದರೆ ಇದರಿಂದ ದೂರ ಇರಬಹುದು. ಆಂಬುಲೆನ್ಸ್ ಸೇವೆಯ ಅಗತ್ಯವಿರುವವರು (ಮೊ: 80173782354)ಕ್ಕೆ ಸಂಪರ್ಕಿಸಬಹುದು

2021-05-21 05:30:00, ajeyanews.com

Ajeya Imageಶಿವಮೊಗ್ಗ, ಮೇ 21:
ಕೋವಿಡ್ ಸೋಂಕಿತರು ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿರುವುದರಿಂದ ಅವರ ಅನುಕೂಲತೆಗಾಗಿ ಉಚಿತ ಆಂಬುಲೆನ್ಸ್ ಸೇವೆಯನ್ನು ನೀಡಲಾಗಿದ್ದು, ಇದರ ಪ್ರಯೋಜನವನ್ನು ಗ್ರಾಮಾಂತರ ಭಾಗದ ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಡಾ. ಶ್ರೀನಿವಾಸ್ ಕರಿಯಣ್ಣ ಮನವಿ ಮಾಡಿದ್ದಾರೆ. 

ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಅಂಬುಲೆನ್ಸ್‌ನ್ನು ನಮ್ಮ ತಂದೆ ಮಾಜಿ ಶಾಸಕ ದಿ.ಕರಿಯಣ್ಣನವರ ನೆನಪಿನಲ್ಲಿ ನೀಡಲಾಗುತ್ತಿದೆ. ಇದು ಗ್ರಾಮಾಂತರ ಭಾಗದ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮತ್ತು ಗುಣಮುಖರಾದ ರೋಗಿಗಳನ್ನು ಆಸ್ಪತ್ರೆಯಿಂದ ಮನೆಗೆ ತರಲು ಹಾಗೂ ಇನ್ನಿತರರು ಆಸ್ಪತ್ರೆಗೆ ತುರ್ತಾಗಿ ಹೋಗಬೇಕಾದ ಸಂದರ್ಭದಲ್ಲಿ ಈ ಆಂಬುಲೆನ್ಸ್‌ನ್ನು ಬಳಸಿಕೊಳ್ಳಬಹುದಾಗಿದೆ ಮತ್ತು ಇದು ಸಂಪೂರ್ಣ ಉಚಿತವಾಗಿದೆ ಎಂದರು. 

ಕೋವಿಡ್‌ನ ಇಂತಹ ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆಯನ್ನು ಮೆರೆಯುವುದೇ ಮನುಷ್ಯ ಧರ್ಮವಾಗಿದೆ. ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು, ಉದ್ಯಮಿಗಳು ತಮ್ಮ ಕೈಲಾದ ಸೇವೆಯನ್ನು ನೀಡಬೇಕಾಗಿದೆ. ಎಲ್ಲರು ಒಟ್ಟಾದರೆ ಕೊರೋನಾವನ್ನು ಓಡಿಸಬಹುದು ಇದರ ಜೊತೆಗೆ ಸಾರ್ವಜನಿಕರ ಎಚ್ಚರಿಕೆಯೂ ಅಗತ್ಯವಾಗಿದೆ. ಕೊರೋನಾಗೆ ಯಾರು ಭಯಪಡಬೇಕಾಗಿಲ್ಲ. ಆದರೆ ಎಚ್ಚರಿಕೆಯಂತೂ ಬೇಕೆ ಬೇಕು. ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ, ಒಳ್ಳೆಯ ಊಟ, ಆದಷ್ಟು ಮನೆಯಲ್ಲಿಯೇ ಇರುವುದನ್ನು ಪಾಲಿಸಿದರೆ ಇದರಿಂದ ದೂರ ಇರಬಹುದು ಎಂದು ಸಲಹೆ ನೀಡಿದರು. 

ಆಂಬುಲೆನ್ಸ್ ಸೇವೆಯ ಅಗತ್ಯವಿರುವವರು (ಮೊ: 80173782354)ಕ್ಕೆ ಸಂಪರ್ಕಿಸಬಹುದು ಎಂದು ಅವರು ಕೋರಿದ್ದಾರೆ. 


ಪದಗಂಟು :       
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©