Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಯುವಸಮೂಹದ ಸ್ಫೂರ್ತಿ ರಾಜೀವ್ ಗಾಂಧಿ: ಸುಂದರೇಶ್

ಸಾಕ್ಷರತಾ ಆಂದೋಲನ, ಪಂಚಾಯತ್ ರಾಜ್ ವ್ಯವಸ್ಥೆ, ಪಕ್ಷಾಂತರ ತಿದ್ದುಪಡಿ ಕಾಯ್ದೆ, ರೋಜ್‌ಗಾರ್ ಯೋಜನೆ ಮುಂತಾದವು ಇಂದಿಗೂ ವರ್ತಮಾನ ಸ್ಥಿತಿಯಲ್ಲಿವೆ ಎಂದರು.

2021-05-21 05:30:00, ajeyanews.com

Ajeya Imageಶಿವಮೊಗ್ಗ, ಮೇ 21:
ಯುವ ಸಮೂಹಕ್ಕೆ ಸ್ಪೂರ್ತಿ ತುಂಬಿದವರು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.

ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ರಾಜೀವ್‌ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ದಿ.ರಾಜೀವ್‌ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 

ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ರಾಜೀವ್‌ ಗಾಂಧಿ ಕೂಡ ಒಬ್ಬರು ದೇಶದಲ್ಲಿ ಅಭಿವೃದ್ಧಿಯ ಹರಿಕಾರ ಎಂದೇ ಅವರು ಪ್ರಸಿದ್ಧಿಯಾಗಿದ್ದಾರೆ. ಬಹಳ ಮುಖ್ಯವಾಗಿ ಯುವ ಸಮೂಹಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಜ್ಞಾನವನ್ನು ಪಡೆದ ಅವರು ಪ್ರಧಾನಿಯಾದ ನಂತರ ದೇಶವನ್ನು ಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಸದೃಢವಾಗಿ ಬೆಳೆಸಿದವರು. ಅವರ ಸಾಕ್ಷರತಾ ಆಂದೋಲನ, ಪಂಚಾಯತ್ ರಾಜ್ ವ್ಯವಸ್ಥೆ, ಪಕ್ಷಾಂತರ ತಿದ್ದುಪಡಿ ಕಾಯ್ದೆ, ರೋಜ್‌ಗಾರ್ ಯೋಜನೆ ಮುಂತಾದವು ಇಂದಿಗೂ ವರ್ತಮಾನ ಸ್ಥಿತಿಯಲ್ಲಿವೆ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅವರ ಪುಣ್ಯಸ್ಮರಣೆಯ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಅತಿ ಹೆಚ್ಚು ಕೊರೋನಾ ಸೋಂಕಿತರ ಮನೆಗಳಿಗೆ ಊಟವನ್ನು ನೀಡಲಾಗುತ್ತಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಳೆದ 19 ದಿನಗಳಿಂದ ನಿರಂತರವಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರಿಗೆ ಹಾಗೂ ವಿವಿಧಡೆಯಲ್ಲಿ ಇರುವ ಅನಾಥರಿಗೆ ಊಟ, ನೀರಿನ ವ್ಯವಸ್ಥೆ ಮಾಡುತ್ತಾ ಬಂದಿದ್ದೇವೆ ಎಂದರು. 

ಪ್ರಮುಖರಾದ ಚೇತನ್, ಮಧುಸೂದನ್, ಮಹಮ್ಮದ್ ನಿಹಾಲ್, ಪ್ರಮೋದ್, ಮಂಜುನಾಥ್, ಪುಷ್ಪ, ಮುಜೀದ್, ಶಶಿ, ಜಫರುಲ್ಲಾ, ಚನ್ನವೀರಪ್ಪ, ಸಂತೋಷ್, ವಿನೋದ್, ಚಂದ್ರಶೇಖರ್, ಸತೀಶ್ ಸೇರಿದಂತೆ ಹಲವರಿದ್ದರು. 


ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©