Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ನಿರ್ಗತಿಕರಿಗೆ ಹೊದಿಕೆ, ಉಪಾಹಾರ ವಿತರಣೆ

2021-05-21 05:30:00, ajeyanews.com

Ajeya Imageಶಿವಮೊಗ್ಗ, ಮೇ 21:
ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಅಂಗವಾಗಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು  ನಗರದ ಅಶೋಕ ವೃತ್ತದಲ್ಲಿ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಿರ್ಗತಿಕರಿಗೆ ಹೊದಿಕೆ, ಹಣ್ಣು, ಉಪಾಹಾರವನ್ನು ವಿತರಿಸಲಾಯಿತು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್ ಮಾತನಾಡಿ, ರಾಜೀವ್ ಗಾಂಧಿಯವರು ಅದ್ಬುತ ಕನಸುಗಾರರಾಗಿದ್ದರು. ಡಿಜಿಟಲ್ ಕರಣವನ್ನು ದೇಶದಕ್ಕೆ ತಂದವರು. ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿದವರು, ಯುವಕರು ರಾಜಕೀಯವಾಗಿ ಮುಂದೆ ಬರಬೇಕು. ಯುವ ಸಮುದಾಯದ ಬಗ್ಗೆ ಅತ್ಯಂತ ಕಾಳಜಿ ವಹಿಸಿದವರು. ಅವರು ಪ್ರಧಾನಿಯಾದಾಗ ಅನೇಕ ಜನಪರ ಯೋಜನೆಗಳು ಜಾರಿಗೆ ಬಂದಿದ್ದು, ಈಗಲೂ ಕೂಡ ಅವು ಜಾರಿಯಲ್ಲಿವೆ ಎಂದರು. 

ಮಹಾನಗರ ಪಾಲಿಕೆ ಸದಸ್ಯ ರೇಖಾ ರಂಗನಾಥ್, ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯುವ ಕಾಂಗ್ರೆಸ್  ಉತ್ತರ ಬ್ಲಾಕ್ ಅಧ್ಯಕ್ಷ ಬಿ.ಲೋಕೇಶ್, ಗ್ರಾಮಾಂತರ ಅಧ್ಯಕ್ಷ ಈ.ಟಿ. ನಿತಿನ್, ದಕ್ಷಿಣ ಬ್ಲಾಕ್ ಎಸ್ .ಕುಮಾರೇಶ್, ಪದಾಧಿಕಾರಿಗಳಾದ ಎಂ.ರಾಹುಲ್, ಕೆ.ಎಲ್ .ಪವನ್, ಎಂ.ರಾಕೇಶ್, ವೆಂಕಟೇಶ್ ಕಲ್ಲೂರ್, ನವೀನ್, ದೇವರಾಜ್ ಇತರರಿದ್ದರು.

ಪದಗಂಟು :        
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©