Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಉಚಿತ ಅಂಬ್ಯುಲೆನ್ಸ್ ಸೇವೆಗೆ ಚಾಲನೆ

2021-05-21 05:30:00, ajeyanews.com

Ajeya Imageಶಿವಮೊಗ್ಗ, ಮೇ 21:
ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಶಾಖೆ ಹಾಗೂ ಮಾನಸ ಸಮೂಹ ಸಂಸ್ಥೆಗಳು ಜಂಟಿಯಾಗಿ  ಕೋವಿಡ್ ಸೋಂಕಿತರಿಗಾಗಿ ಉಚಿತ ಅಂಬುಲೆನ್ಸ್ ಸೇವೆಯನ್ನು ಇಂದಿನಿಂದ ಪ್ರಾರಂಭಿಸಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಡಾ.ರಜನಿ ಪೈ, ಡಾ.ಪ್ರೀತಿ ಶಾನುಭಾಗ್, ಡಾ.ದಿನೇಶ್ ಎಸ್, ರೋಟರಿ ವಿಜಯ್‌ಕುಮಾರ್, ಧರಣೇಂದ್ರ ದಿನಕರ್, ಪ್ರೊ. ಚಂದ್ರಶೇಖರ್, ಬಸವರಾಜ್, ಭಾರತಿ ಚಂದ್ರಶೇಖರ್ ಮೊದಲಾದವರಿದ್ದರು. 

ಈ ಆಂಬುಲೆನ್ಸ್ ವಾಹನದಲ್ಲಿ ಆಕ್ಸಿಜನ್ ವ್ಯವಸ್ಥೆ ಹೊಂದಿದ್ದು, ಶಿವಮೊಗ್ಗ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಲಭ್ಯವಿರುತ್ತದೆ. ಕೋವಿಡ್ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆಗೆ ಇದನ್ನು ಬಳಸಬಹುದಾಗಿದ್ದು, ಬೆಳಿಗ್ಗೆ 7 ರಿಂದ ಸಂಜೆ 7ಗಂಟೆಯವರೆಗೆ ಲಭ್ಯವಿರುತ್ತದೆ. 

ಅಂಬುಲೆನ್ಸ್‌ಗಾಗಿ (ಮೊ:9606967825)ಕ್ಕೆ ಸಂಪರ್ಕಿಸಬಹುದಾಗಿದೆ. 

ಪದಗಂಟು :     
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©